ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕಿನ ಸಮುದಾಯದ ಅಭಿವೃದ್ಧಿ ವಿಭಾಗದ ಮೂಲಕ ತಾಲೂಕಿಗೆ ಒಟ್ಟು 18 ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರ ಆಯ್ಕೆಯಾಗಿದ್ದು ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ರವರು ಸಾಂಕೇತಿಕವಾಗಿ ಶಿಕ್ಷಕಿಯವರಿಗೆ ಮಂಜೂರಾತಿ ಪತ್ರ ಹಸ್ತಾಂತರ ಮಾಡಿದರು.
ಕಾರ್ಯಕ್ರಮ ದಲ್ಲಿ ಯೋಜನಾಧಿಕಾರಿಗಳು ಅಶೋಕ್, ಎಸ್ ಡಿ ಎಂ. ಮಹಿಳಾ ಐಟಿಐ ಕಾಲೇಜು ಪ್ರಾಂಶುಪಾಲರು ಪ್ರಕಾಶ್ ಕಾಮತ್,, ಜಯರಾಜ್ ಸಂತೋಷ, ತಾಲೂಕಿನಲ್ಲಿ ಎಲ್ಲಾ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಉಪಸ್ಥಿತರಿದ್ದರು.