ಬಂಟ್ವಾಳ ತಾಲೂಕಿನ ಕೊಲ್ಲೂರು ಗ್ರಾಮದ ಭವಾನಿಶಂಕರ್ ಟಿ.ಕೆ ರವರು 3 ಫೆಬ್ರವರಿ 2016 ರಂದು ರಸ್ತೆ ಅಪಘಾತದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾಗಿರುತ್ತಾರೆ. ಮೂರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿ ದಿನವನ್ನು ಕಳೆದ ವ್ಯಕ್ತಿ ನಂತರ ಒಂದು ತಿಂಗಳ ಕಾಲ ಸೌತಡ್ಕದ ಸೇವಾಧಾಮದಲ್ಲಿ ಪುನಶ್ಚೇತನವನ್ನು ಪಡೆದುಕೊಂಡು ತನ್ನ ಕೆಲಸವನ್ನು ತಾನು ಮಾಡಿಕೊಳ್ಳುವಷ್ಟು ಸಬಲರಾಗಿದ್ದಾರೆ. ಹತ್ತಿಯಿಂದ ಬತ್ತಿ ಮಾಡುವ ಯಂತ್ರದ ಮೂಲಕ ಸ್ವ- ಉದ್ಯೋಗವನ್ನು ಮಾಡುತ್ತ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗಿದ್ದು ಈ ನಿಟ್ಟಿನಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ಸಂಸ್ಥೆಯ ಪರವಾಗಿ ಹತ್ತಿಯಿಂದ ಬತ್ತಿ ಮಾಡುವ ಯಂತ್ರವನ್ನು ಹಸ್ತಾಂತರಿಸಲಾಯಿತು.