ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.) ಬಂಟ್ವಾಳ ಇದರ ಸಿದ್ಧ ಕಟ್ಟೆ ವಲಯದ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಾನಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಪಂಜಿಕಲ್ಲು ಇಲ್ಲಿನ ಅನ್ನ ಛತ್ರ ಕಟ್ಟಡ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜರಾದ ರೂ 1,00,000/- ಅನುದಾನದ ಡಿ ಡಿ ಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಗರಡಿಯ ಸಮಿತಿಯ ಉಪಾಧ್ಯಕ್ಷರು ಶ್ರೀ ಕೇಶವ ಪೂಜಾರಿ, ಕೋಶಾಧಿಕಾರಿ ಶ್ರೀ ಜಯ ಕುಂದರ್, ಗ್ರಾಮಾಭಿವೃದ್ಧಿ ಯೋಜನೆಯ ಸಿದ್ಧ ಕಟ್ಟೆ ವಲಯ ಅಧ್ಯಕ್ಷ ಶ್ರೀ ರಾಧ ಕೃಷ್ಣ ಆಚಾರ್ಯ, ಸಮಿತಿಯ ಸದಸ್ಯರಾದ ಶ್ರೀ ಪ್ರಕಾಶ್ ಮಡಿವಾಳ, ಜನಜಾಗೃತಿ ಸಮಿತಿ ಸದಸ್ಯ ಶ್ರೀ ಶಶಿಧರ, ಆಚಾರಿಪಲ್ಕೆ, ಒಕ್ಕೂಟ ಅಧ್ಯಕ್ಷ ಶ್ರೀ ಆನಂದ ಪೂಜಾರಿ ವಲಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ, ಸೇವಾಪ್ರತಿನಿಧಿ ಶ್ರೀಮತಿ ಭವ್ಯಾ ಉಪಸ್ಥಿತರಿದ್ದರು