ಸೇವಾ ಭಾರತೀಯ ಚೇತನ ಬಾಲ ವಿಕಾಸ ಕೇಂದ್ರಕ್ಕೆ ದಿವ್ಯ ಚೇತನ ಉಪಯೋಗಿ ಸಾಧನಗಳ ಹಸ್ತಾಂತರ

0
114

ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಒಂದು ಸರಳ ಕಾರ್ಯಕ್ರಮ ಮಾಡಿ, ಮಂಗಳೂರಿನ ಸೇವಾ ಭಾರತೀಯ ಚೇತನ ಬಾಲ ವಿಕಾಸ ಕೇಂದ್ರಕ್ಕೆ ದಾನಿಗಳ ಸಹಾಯದಿಂದ ಜೋಡಿಸಲ್ಪಟ್ಟ ಸುಮಾರು 50000/- ರುಪಾಯಿ ಮೊತ್ತದ ಈ ಕೆಳಗಿನ ದಿವ್ಯ ಚೇತನ ಉಪಯೋಗಿ ಸಾಧನಗಳನ್ನು ಹಸ್ತಾಂತರಿಸಲಾಯಿತು.
ಪೇಷಂಟ್ ಮಂಚ -1
ಏರ್ ಬೆಡ್ -1
ವಾಕರ್ -1
ವಾಕಿಂಗ್ ಸ್ಟಿಕ್ -5
ಸಿಪಿ ಕುರ್ಚಿ -1
ಲರ್ನಿಂಗ್ ಕಿಟ್ -1
ನಿತ್ಯೋಪಯೋಗಿ ವಸ್ತು ಗುರುತು ಬೋರ್ಡ್ -1
ಈ ಸಂದರ್ಭದಲ್ಲಿ ಸೇವಾ ಭಾರತೀಯ ಕಾರ್ಯದರ್ಶಿ ಶ್ರೀ ನಾಗರಾಜ್ ಭಟ್, ಚೇತನದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ, ಕುಮಾರಿ ವಿದ್ಯಾ, ಸೇವಾ ಭಾರತೀಯ ಸ್ವಯಂಸೇವಕರಾದ ಶ್ರೀ ವಿಠ್ಠಲದಾಸ್ ಮಲ್ಯ,ಶ್ರೀ ರೋಹಿತಾಕ್ಷ, ಶ್ರೀ ಉಮೇಶ್ ಶೇನೋಯ್ , ಪೋಷಕರಾದ ಶ್ರೀ ಪ್ರಕಾಶ್ ಪೈ ಮತ್ತು ಸಿಬಂದಿ ವರ್ಗದವರು ಸೇವಾ ಭಾರತಿ ಕಡೆಯಿಂದ ವಸ್ತುಗಳನ್ನು ಸ್ವೀಕರಿಸಿದರು. ಸಕ್ಷಮದ ಶ್ರೀ ರಾಜಶೇಖರ ಭಟ್ ಕಾಕುಂಜೆ, ಶ್ರೀ ಹರೀಶ್ ಪ್ರಭು, ಶ್ರೀ ಸತೀಶ್ ರಾವ್, ಶ್ರೀ ಭಾಸ್ಕರ ಹೊಸಮನೆ, ಶ್ರೀಮತಿ ಸಂಧ್ಯಾ ಪ್ರಸಾದ್, ಶ್ರೀಮತಿ ದಿವ್ಯ ಪ್ರಭು, ಶ್ರೀಮತಿ ಗೀತಾ ಲಕ್ಷ್ಮೀಶ ಮತ್ತು ಶ್ರೀಮತಿ ಶ್ಯಾಮಲ ಭಟ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಕ್ಷಮ, ದಿವ್ಯಾಂಗರ ಸಬಲೀಕರಣದ ಯಾವದೇ ಕಾರ್ಯದಲ್ಲಿ ತನ್ನಿಂದ ಆಗುವ ಎಲ್ಲಾ ಕೆಲಸವನ್ನು ಮಾಡುವುದಾಗಿ ಹೇಳಿದರು.
ಸೇವಾ ಭಾರತೀಯ ಕಾರ್ಯದರ್ಶಿ ಶ್ರೀ ನಾಗರಾಜ್ ಅವರು ಸಕ್ಷಮ ಮತ್ತು ಎಲ್ಲಾ ಸಂಬಂಧಪಟ್ಟ ದಾನಿಗಳಿಗೆ ಧನ್ಯವಾದ ಸಮರ್ಪಿಸುತ್ತಾ ಎಲ್ಲರಿಗೂ ಶುಭವನ್ನು ಕೋರಿದರು. ಶ್ರೀಮತಿ ಸುಪ್ರೀತಾ ಅವರು ಮಾತನಾಡುತ್ತಾ ಕೊಟ್ಟ ಎಲ್ಲಾ ವಸ್ತುಗಳು ಸಮಾಜಕ್ಕೆ ಮತ್ತು ಶಾಲೆಗೆ ತುಂಬಾ ಉಪಯೋಗವಾಗುವನ್ನತದ್ದು, ಇನ್ನೂ ಮುಂದೆಯೂ ಸಕ್ಷಮದ ಸಹಕಾರವನ್ನು ಕೋರಿದರು. ಪೋಷಕರಾದ ಪ್ರಕಾಶ್ ಪೈ ಸಕ್ಷಮ ದಕ್ಷಿಣ ಕನ್ನಡ ಮಾಡುವ ಕೆಲಸವನ್ನು ಸಮಾಜ ಗುರುತಿಸ ತೊಡಗಿದೆ ಎಂಬುದಾಗಿ ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here