ಮೂಡುಬಿದಿರೆ: ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ಜನವರಿ ತಿಂಗಳ 106 ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಿಕರ್ನಕಟ್ಟೆಯ ನಿವಾಸಿ ನಟರಾಜ್ ಅವರು ಕೆಲಸ ಮಾಡುವಾಗ 10 ಫೀಟ್ ನಿಂದ ಕೆಳಗೆ ಬಿದ್ದು ಸೊಂಟದ ಮೂಳೆ ಮುರಿತ ವಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪತ್ನಿ ಎರಡು ಹೆಣ್ಣು ಮಕ್ಕಳಿದ್ದು ಕೂಲಿ ಮಾಡುತ್ತಿದ್ದು ಕಡುಬಡವರಾದ ಇವರ ಕಷ್ಟ ಅರಿತ ನಮ್ಮ ತಂಡ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅವರ ಬಾವನವರ ಕೈಗೆ ಸಹಾಯ ಹಸ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ದೀನ್ ರಾಜ್ ಕೆ ಬಸವರಾಜ ಮಂತ್ರಿ ಗಣೇಶ್ ಪೈ ಬಾಸ್ಕರ ದೇವಾಡಿಗ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ. ನಿಲೇಶ್ ಕಟೀಲು ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನಗಿರಿ ಪ್ರಭಾಕರ, ಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್, ದಿನೇಶ್ ಸಿದ್ದಕಟ್ಟೆ, ಶಾರದಾ ಅಂಚನ್, ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.

