ಪಡುಬಿದ್ರಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವು ವಿಶ್ವ ಮಾನ್ಯತೆಯ ಸಂದೇಶವಾಗಿದೆ. ಗುರುಗಳ ವಾಣಿಯಂತೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಅನುಕರಣೀಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಹೆಜಮಾಡಿ ಬಿಲ್ಲವರ ಸಂಘ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಅಂಗವಾಗಿ ಭಾನುವಾರ ಸಂಘದ ಸಭಾಂಗಣದಲ್ಲಿ ನಡೆದ ಜಯಂತಿ ಮಹೋತ್ಸವ ಮತ್ತು ವಾಸುದೇವ ಆರ್. ಕೋಟ್ಯಾನ್ ಸ್ಮರಣಾರ್ಥ ಸಾರ್ವಜನಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಸನ್ಮಾನ: ಹೊಸ ಅಂಗಣದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ : ವಾಸುದೇವ ಆರ್. ಕೋಟ್ಯಾನ್ ಸ್ಮರಣಾರ್ಥ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಕ್ಲಾಸ್ 1 ಗುತ್ತಿಗೆದಾರ ಧೀರಜ್ ಹೆಜ್ಮಾಡಿ, ಅಂಬಿಕಾ ಧೀರಜ್, ಹೆಜ್ಮಾಡಿ ಶ್ರೀಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಆಡಳಿತ ಮೊಕ್ತೇಸರ ಸುರೇಶ್ ಕೆ.ಶೆಟ್ಟಿ, ವಿದ್ಯಾನಿಧಿ ಪ್ರಾಯೋಜಕರಾದ ಮೋಹಿನಿ ವಾಸುದೇವ ಕೋಟ್ಯಾನ್, ಅಲ್ ಅಝಹರ್ ಶಾಲಾ ಸಂಚಾಲಕ ಶೇಕಬ್ಬ ಕೋಟೆ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಶ್ಮಾ ಎ. ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಸಮಾಜ ಸೇವಕ ಶೇಖರ್ ಹೆಜ್ಮಾಡಿ, ಸಂಘದ ಉಪಾಧ್ಯಕ್ಷ ಸುಧೀರ್ ಕರ್ಕೇರ, ಮುಂಬಯಿ ಸಮಿತಿಯ ಯೋಗೀಶ್ ಹೆಜ್ಮಾಡಿ, ಸಂಘದ ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಲಾವಣ್ಯ ಪ್ರಬೋದ್, ಪ್ರಧಾನ ಅರ್ಚಕ ಹರೀಶ್ ಶಾಂತಿ, ಹೆಜಮಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಗುರುರಾಜ್ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಶಿವರಾಮ ಜೆ.ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಬೋದ್‌ಚಂದ್ರ ಹೆಜ್ಮಾಡಿ ವಂದಿಸಿದರು.
ಗುರುಜಯಂತಿ ಅಂಗವಾಗಿ ಗುರು ಮಂದಿರದಲ್ಲಿ ಗಣಹೋಮ, ನವಕ ಪ್ರಧಾನ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಭಜನಾ ಸಂಕೀರ್ತನೆ, ಮಹಾಪೂಜೆ ಭಜನಾಕಾರ್ಯಕ್ರಮ, ಅನ್ನ ಸಂತರ್ಪಣೆ, ಗುರು ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Home Uncategorized ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ...