ಹರಿಶ್ಚಂದ್ರ ಪಿ. ಸಾಲ್ಯಾನ್‌ರವರು ಸರ್ಕಾರಿ ಸೇವೆಯಿಂದ ನಿವೃತ್ತಿಆದ ನಂತರ ತುಳು ಮತ್ತುಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯುತ್ತಾ ಬಂದಿದ್ದಾರೆ.ಇವರು ಹೊಸ ಅಂಗಣ ಮಾಸ ಪತ್ರಿಕೆಯನ್ನು ಆರಂಭಿಸಿ 10 ವರ್ಷಗಳಾಯಿತು.ಈ ಪತ್ರಿಕೆಯಲ್ಲಿ ಲೇಖಕರಿಗೆ ಬರೆಯಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಇವರಿಗೆ ನಾವೆಲ್ಲರೂ ಪ್ರೋತ್ಸಾಹಕೊಡಬೇಕೆಂದು ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರುಅವರು ಹೇಳಿದರು.
ಅವರು ಕೆ. ಎಸ್. ರಾವ್ ನಗರದ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಮಾರ್ಚ್ 10ರಂದು ಹೊಸ ಅಂಗಣಪ್ರಕಟಣಾಲಯದಲ್ಲಿ ಪ್ರಕಟವಾದ ಮೂಲ್ಕಿಯಹರಿಶ್ಚಂದ್ರ ಪಿ.ಸಾಲ್ಯಾನ್‌ರವರ ‘ತುಳುನಾಡ್ದ ತುಳು ಗಾದೆಲು’ 22ನೇ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂತಹ ಕೃತಿಗಳನ್ನು ಬರೆಯುವವರು ಬಹಳ ಕಡಿಮೆ.ಹರಿಶ್ಚಂದ್ರ ಪಿ. ಸಾಲ್ಯಾನ್‌ರವರನ್ನು ಒಳ್ಳೆಯ ಕೆಲಸಮಾಡಿದ್ದಕ್ಕೆ ನಾವೆಲ್ಲರೂ ಉತ್ತೇಜನಕೊಟ್ಟರೆ ಒಳ್ಳೆಯದುಎಂದು ಹೇಳಿದರು.

ಸಭೆಯಲ್ಲಿ ಮುಖ್ಯಅತಿಥಿಯಾಗಿದ್ದ ಭುವನಾಭಿ ರಾಮ ಉಡುಪ ಸಂಪಾದಕರು ಯುಗಪುರುಷ ಕಿನ್ನಿಗೋಳಿ ಇವರು ಮಾತನಾಡುತ್ತಾ ಹರಿಶ್ಚಂದ್ರ ಪಿ.ಸಾಲ್ಯಾನ್‌ರವರು ಬರೆದ ಮೊದಲ ಕೃತಿಯನ್ನು ಯುಗಪುರುಷ ಪ್ರಕಟಣಾಲಯದಲ್ಲಿ ಪ್ರಕಟಿಸಿದರು. ಮದು-ಮದಿಪು ನುಡಿಕಟ್ಟ್ ಎಂಬ ಕೃತಿಯು ಬಹಳ ಜನಪ್ರಿಯವಾಗಿದೆ. ಅದರಂತೆ ಈ ಕೃತಿಯು ಜನಪ್ರಿಯವಾಗುವುದಕ್ಕೆ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.
ಅತಿಥಿಗಳಾದ ಉದ್ಯಮಿ ಸದಾಶಿವ ಆಚಾರ್ಯ, ಬಂಟರ ಸಂಘದಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕೆ. ಎಸ್. ರಾವ್ ನಗರ ಮೂಲ್ಕಿ ಇದರಅಧ್ಯಕ್ಷರಾದ ಮಹಾಬಲ ಎನ್. ಸನಿಲ್, ತುಳು ಪತ್ರಿಕೆ ಸಂಪಾದಕರು ಪೂವರಿ ವಿಜಯ್‌ಕುಮಾರ್ ಭಂಡಾರಿ ಪುತ್ತೂರು, ಸಮಾಜಿಕಕಾರ್ಯಕರ್ತಜನಾರ್ದನ ಬಂಗೇರ, ಗೋಪಿನಾಥ ಪಡಂಗ, ದಿನೇಶ್‌ಕೊಲ್ನಾಡ್, ಜಯಪಾಲ ಶೆಟ್ಟಿ,ಜೋನ್ ಕ್ವಾಡ್ರಸ್, ಪೋಲೀಸ್ ನಿವೃತ್ತಅಧಿಕಾರಿ ಕೆ.ಎನ್.ಕೋಟ್ಯಾನ್, ಸರೋಜಿನಿ ಸುವರ್ಣ, ಇಂದಿರಾ, ವಿಜಯಎಚ್.ಸಾಲ್ಯಾನ್, ಕೇಶವನಂದಗುರೂಜಿ, ಕರುಣಾಕರ ಸುವರ್ಣ, ಜಿ. ಟಿ. ಆಚಾರ್ಯ ಮುಂಬೈ,ಜೆ.ಎಸ್. ಕರ್ಕೇರಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಪ್ರತಿಭಾನ್ವಿತ ಲೇಖಕರಾದ ಶರೋನ್ ಶೆಟ್ಟಿಅವರಿಗೆ ಸನ್ಮಾನಿಸಲಾಯಿತು.ಜೆಸಿ ದಿನೇಶ್ ಶೆಟ್ಟಿ ಸ್ವಾಗತಿಸಿದರು.ವಾಸು ಪೂಜಾರಿಯವರು ವಂದನಾರ್ಪಣೆ ಮಾಡಿದರು.

