ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೋರಾಗಿ ಶಬ್ದ ಮಾಡಿ ಚಲಾಯಿಸುತ್ತಿದ್ದ ಬೈಕ್ ಗಳಲ್ಲಿ ಅಳವಡಿಸಲಾಗಿರುವ ಡಿಫೆಕ್ಟಿವ್ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಬುಲ್ಡೋಜರ್ ಬಳಸಿ ನಾಶಪಡಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಮಣಿಪಾಲ ಪೊಲೀಸ್ರು ವಿಶೇಷ ತಪಾಷಣೆಗಳನ್ನು ನಡೆಸಿದ್ದರು. ಈ ವಿಶೇಷ ತಪಾಷಣೆಯಲ್ಲಿ ಒಟ್ಟು 120 ಡಿಫೆಕ್ಟಿವ್ ಸೈಲೆನ್ಸರ್ಗಳನ್ನು ಪತ್ತೆ, 120 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಈ 120 ಪ್ರಕರಣಗಳಲ್ಲಿ ಒಟ್ಟು ರೂ.1,05,000 ದಂಡವನ್ನು ವಸೂಲಿ ಮಾಡಲಾಗಿರುತ್ತದೆ.
ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ್ ಸಮಕ್ಷಮ ಮಣಿಪಾಲ ಪೊಲೀಸ್ ಠಾಣೆಯ ಮುಂದೆ ಬುಲ್ದೊಜರ್ ಬಳಸಿ ನಾಶ ಪಡಿಸಲಾಯಿತು. ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಜರಿದ್ದರು.

