ಹಾಸನ ನಗರದ ಹೇಮಾವತಿ ಪ್ರತಿಮೆ ಸಮೀಪದ ಕಾರು ನಿಲ್ದಾಣದಲ್ಲಿ ಶ್ರೀರಾಮ ಸೇನೆವತಿಯಿಂದ ವಿಶೇಷ ಪೂಜೆ ಮಾಡಿ. ಪಾನಕ -ಮಜ್ಜಿಗೆ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಮೊದಲು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಜಯಘೋಷಗಳ ನಡುವೆ ಆದ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು. ಬಿಸಿಲಿನ ತೀವ್ರತೆಯನ್ನು ಮನಗಂಡು ಸಾರ್ವಜನಿಕರಿಗೆ ರುಚಿಕರ ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಸಮಾಜದಲ್ಲಿ ಸಹಕಾರ, ಸೇವಾ ಮನೋಭಾವ ಹಾಗೂ ಸಾಂಸ್ಕೃತಿಕ ಏಕತೆಯನ್ನು ಪ್ರತಿಬಿಂಬಿಸುವಂತಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಧರ್ಮ ನಾಯಕ್, ಸಾಹಿತಿ ಹೆಚ್. ಎಸ್. ಪ್ರತಿಮಾ ಹಾಸನ್, ಹಾಸನ ಜಿಲ್ಲಾ ಕಾರ್ಯಧ್ಯಕ್ಷರು ಪುನೀತ್ ಕೆಕೆ. ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬಾಗಲಕೋಟೆ ಹಾಸನ ಜಿಲ್ಲಾ ಗೋರಕ್ಷಕ ವಿನಯ್ ಕೆರೆಹಳ್ಳಿ ಹಾಸನಜಿಲ್ಲಾ ನಗರ ಅಧ್ಯಕ್ಷರು ದರ್ಶನ್ ಅರಕಲಗೂಡು ತಾಲೂಕು ಅಧ್ಯಕ್ಷರು ಮಂಜು ಕೆ ಹಾಸನ ತಾಲೂಕು ಅಧ್ಯಕ್ಷರು ಜಗದೀಶ್ ಸಂಘಟನಾ ಕಾರ್ಯದರ್ಶಿ ಶಶಿ ಇನ್ನೂ ಹಲವರು ಉಪಸ್ಥಿತರಿದ್ದರು.

