ಮುಂಬೈ, : ಭಾರತದ ಪ್ರಮುಖ ಖಾಸಗಿ ಕ್ಷೇತ್ರದ ಬ್ಯಾಂಕ್ ಆಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್, ಇಂದು ಪ್ರತಿಷ್ಠಿತ ಕನ್ವರ್ಸೇಷನಲ್ ಎಐ ಕಂಪನಿ ಆಗಿರುವ ಕೋರೋವರ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಿಸಿದೆ. ಕೊರೋವರ್ ಸಂಸ್ಥೆಯು ಭಾರತ್‌ಜಿಪಿಟಿ ಎಂಬ ವಿಶಿಷ್ಟವಾದ, ಸ್ವತಂತ್ರವಾದ ಮತ್ತು ಉದ್ಯಮ-ದರ್ಜೆಯ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಂ) ಅನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ.
ಕೊರೋವರ್ ಈಗಾಗಲೇ 1 ಬಿಲಿಯನ್ ಬಳಕೆದಾರರನ್ನು ಹೊಂದಿದ್ದು, 25,000ಕ್ಕೂ ಹೆಚ್ಚು ಉದ್ಯಮಗಳು ಮತ್ತು ಡೆವಲಪರ್ ಗಳ ವಿಶ್ವಾಸಾರ್ಹತೆ ಗಳಿಸಿಕೊಂಡಿದೆ. ಇದು ಕನ್ವರ್ಸೇಷನಲ್ ಎಐ ಏಜೆಂಟ್‌ಗಳು, ಎಐ ಅಸಿಸ್ಟೆಂಟ್ ಗಳು (ವಿಡಿಯೋಬಾಟ್, ವಾಯ್ಸ್ ಬಾಟ್, ಚಾಟ್ ಬಾಟ್) ಮತ್ತು ಟೆಲಿಫೋನಿ ಎಐ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ಉತ್ಪನ್ನಗಳು ಭಾರತ್‌ಜಿಪಿಟಿಯಿಂದ ಚಾಲಿತವಾಗಿದ್ದು, ಇದು ಸಂಪೂರ್ಣವಾಗಿ ಭಾರತದಲ್ಲಿ, ಭಾರತಕ್ಕಾಗಿ ನಿರ್ಮಿತವಾದ ಬಹುಭಾಷಾ, ಬಹುಮಾದರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬಹುದಾದ ಅನುಕೂಲಕರ ಎಲ್ಎಲ್ಎಂ ಆಗಿದೆ.
ಈ ಕುರಿತು ಮಾತನಾಡಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರೂಪ್ ಹೆಡ್ ಟ್ರೆಷರಿ ಅರುಪ್ ರಕ್ಷಿತ್ ಅವರು, “ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಹು ಭಾರತೀಯ ಭಾಷೆಗಳಲ್ಲಿ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುವ ಭಾರತ್‌ಜಿಪಿಟಿಯನ್ನು ಅಭಿವೃದ್ಧಿ ಪಡಿಸಿರುವ ಕೋರೋವರ್ ನ ಸಾಧನೆ ನಮಗೆ ವಿಶೇಷವಾಗಿ ಕಂಡಿದೆ. ವಿಶಿಷ್ಟ ಭಾಷಾ ಅಗತ್ಯಗಳನ್ನು ಪೂರೈಸುವ ಕೋರೋವರ್ ನ ಪರಿಣತಿಯನ್ನು ನಾವು ಗೌರವಿಸುತ್ತೇವೆ. ಕೋರೋವರ್ ಮೂಲಕ ಇಂಡಿಯಾಎಐ ಸ್ಟಾರ್ಟ್‌ಅಪ್ಸ್ ಗ್ಲೋಬಲ್ ಆಕ್ಸಲರೇಟರ್ ಪ್ರೋಗ್ರಾಮ್ ನಲ್ಲಿ ಅರ್ಥಪೂರ್ಣ ಪಾತ್ರ ನಿರ್ವಹಿಸಲು ನಾವು ಹೆಮ್ಮೆ ಪಡುತ್ತೇವೆ” ಎಂದು ಹೇಳಿದರು.
ಕೋರೋವರ್ ನ ಸಂಸ್ಥಾಪಕ ಮತ್ತು ಸಿಇಓ ಅಂಕುಶ್ ಸಭರವಾಲ್ ಅವರು ಮಾತನಾಡಿ, “ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರ ಹೂಡಿಕೆದಾರರ ನಂಬಿಕೆ ಮತ್ತು ನೆರವು ಗಳಿಸಿರುವುದು ನಿಜಕ್ಕೂ ನಮಗೆ ದೊರೆತ ಅಪೂರ್ವ ಗೌರವವಾಗಿದೆ. ಏಕೆಂದರೆ ಭಾರತ್‌ಜಿಪಿಟಿಯ ವ್ಯಾಪ್ತಿ ಮತ್ತು ಪ್ರಭಾವವನ್ನು ನಾವು ವಿಸ್ತರಿಸುತ್ತಿದ್ದೇವೆ. ಈ ಸಹಭಾಗಿತ್ವವು ಸ್ವತಂತ್ರ, ಸುರಕ್ಷಿತ, ಸಮಗ್ರ ಮತ್ತು ಭಾರತದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಬಳಕೆಯಾಗಬಲ್ಲ ಎಐ ಉತ್ಪನ್ನ ನಿರ್ಮಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ” ಎಂದರು.
ಕೊರೋವರ್ ಸಂಸ್ಥೆಯು ಸ್ಟೇಷನ್ ಎಫ್, ಪ್ಯಾರಿಸ್ ಮತ್ತು ಎಚ್‌ಇಸಿ ಪ್ಯಾರಿಸ್ ಸಹಭಾಗಿತ್ವದಲ್ಲಿ ನಡೆಯುವ ಒಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಆಕ್ಸಲರೇಟರ್ ಕಾರ್ಯಕ್ರಮವಾದ ಇಂಡಿಯಾಎಐ ಸ್ಟಾರ್ಟ್‌ಅಪ್ಸ್ ಗ್ಲೋಬಲ್ ಆಕ್ಸಲರೇಟರ್ ಪ್ರೋಗ್ರಾಮ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಿರುವ ಇಂಡಿಯಾಎಐ ಮಿಷನ್ ನಂತಹ ಸರ್ಕಾರಿ ಯೋಜನೆಗಳಿಗೆ ಧನ್ಯವಾದ ಸಲ್ಲಿಸಿದೆ.
ಕೋರೋವರ್ ನ ಭಾರತ್‌ಜಿಪಿಟಿಯು ಆಳವಾದ ಭಾಷಾ ತಿಳುವಳಿಕೆ, ಉಪಭಾಷಾ ವೈವಿಧ್ಯತೆ ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ವಾಯ್ಸ್, ವಿಡಿಯೋ ಮತ್ತು ಚಾಟ್ ಮೂಲಕ ಕೆಲಸ ಮಾಡಬಲ್ಲ ಸಂವಾದಾತ್ಮಕ ಎಐ ಏಜೆಂಟ್ ಗಳನ್ನು ನಿಯೋಜಿಸಲು ಉದ್ಯಮಗಳಿಗೆ ಅನುವು ಮಾಡಿಕೊಡುತ್ತದೆ. ಕಂಪನಿಯ ಇತ್ತೀಚಿನ ಭಾರತ್‌ಜಿಪಿಟಿ ಮಿನಿ ಉತ್ಪನ್ನವು ಎಐ ಅನ್ನು ಕಡಿಮೆ-ಗುಣಮಟ್ಟದ ಡಿವೈಸ್‌ಗಳಲ್ಲಿ ಬಳಸಲು ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆಯೇ (ಟೆಲಿಫೋನಿ ಎಐ) ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.