ಎಚ್.ಡಿ.ಎಫ್.ಸಿ. ಬ್ಯಾಂಕ್‌ನಿಂದ ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನದ ಅಂಗವಾಗಿ ಬೆಂಗಳೂರು ಮತ್ತು ಗೌಹಾಟಿಯಲ್ಲಿ ಸ್ಟಾರ್ಟ್‌ಅಪ್ ಲೌಂಜ್‌ಗಳಿಗೆ ಚಾಲನೆ

0
24

ಬೆಂಗಳೂರು, ಗೌಹಾಟಿ, ಜನವರಿ 15, 2026 : ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್, ಜನವರಿ 16ರಂದು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನದ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತನ್ನ ವಿಶೇಷ ಸ್ಟಾರ್ಟ್‌ಅಪ್ ಲೌಂಜ್‌ಗಳ ಪ್ರಾರಂಭವನ್ನು ಘೋಷಿಸಿದೆ. ಈ ಲೌಂಜ್‌ಗಳನ್ನು ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನ 24ನೇ ಮುಖ್ಯರಸ್ತೆಯಲ್ಲಿರುವ ಶಾಖೆ ಹಾಗೂ ಗೌಹಾಟಿಯ ಜಿ.ಎಸ್. ರೋಡ್ ಶಾಖೆಯಲ್ಲಿ ಆರಂಭಿಸಲಾಗುತ್ತಿದೆ.

ಈ ಸ್ಟಾರ್ಟ್‌ಅಪ್ ಲೌಂಜ್‌ಗಳು ಭಾರತದ ಸ್ಟಾರ್ಟ್‌ಅಪ್ ಇಕೊಸಿಸ್ಟಂ ಜೊತೆಗೆ ಬ್ಯಾಂಕಿನ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿವೆ. ಇವು ಸ್ಟಾರ್ಟ್‌ಅಪ್‌ಗಳಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಜೊತೆಗೆ, ಕೆಲಸ ಮಾಡಲು, ಚರ್ಚೆ ನಡೆಸಲು ಮತ್ತು ಹೊಸ ಆಲೋಚನೆಗಳನ್ನು ರೂಪಿಸಲು ವೃತ್ತಿಪರ ಹಾಗೂ ಸಹಕಾರಿ ವಾತಾವರಣವನ್ನು ಒದಗಿಸುತ್ತವೆ. ಜೊತೆಗೆ, ಸಂಸ್ಥಾಪಕರು, ಹೂಡಿಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹಾಗೂ ವಿಸ್ತೃತ ಸ್ಟಾರ್ಟ್‌ಅಪ್ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಸೂಕ್ತ ವೇದಿಕೆಯಾಗಲಿವೆ. ಈ ಲೌಂಜ್‌ಗಳಲ್ಲಿ ಸ್ಟಾರ್ಟ್‌ಅಪ್ ಇಕೊಸಿಸ್ಟಂಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು, ಸಂವಾದಗಳು ಮತ್ತು ಜಾಲ ನಿರ್ಮಾಣ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಈ ಕುರಿತು ಮಾತನಾಡಿದ ಪಶ್ಚಿಮ ಮತ್ತು ದಕ್ಷಿಣ ಭಾರತ ಪ್ರದೇಶಗಳ ಜವಾಬ್ದಾರಿ ಹೊಂದಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್‌ನ ರೀಟೇಲ್ ಬ್ರಾಂಚ್ ಬ್ಯಾಂಕಿಂಗ್ ಮತ್ತು ಆಲ್ಟರ್ನೇಟ್ ಬ್ಯಾಂಕಿಂಗ್ ಚಾನೆಲ್ಸ್ ಅಂಡ್ ಪಾರ್ಟ್‌ನರ್ಸ್ ಗ್ರೂಪ್ ಹೆಡ್ ಶ್ರೀ ಸಂಪತ್ ಕುಮಾರ್, “ಬೆಂಗಳೂರು ದೇಶದ ಅತ್ಯಂತ ಉಜ್ವಲ ಸ್ಟಾರ್ಟ್‌ಅಪ್ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಆರಂಭಿಸಲಾಗಿರುವ ಬ್ಯಾಂಕಿನ ಸ್ಟಾರ್ಟ್‌ಅಪ್ ಲೌಂಜ್, ಸಮಾನ ಮನಸ್ಕ ಜನರೊಂದಿಗೆ ಕೆಲಸ ಮಾಡಲು ಬಯಸುವ ಸಂಸ್ಥಾಪಕರಿಗೆ ಜಾಲ ನಿರ್ಮಾಣದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ, ಅವರು ಬ್ಯಾಂಕಿನ ಸ್ಟಾರ್ಟ್‌ಅಪ್ ಬಿಲ್ಡ್‌ಅಪ್ ಕಾರ್ಯಕ್ರಮದ ಅಡಿಯಲ್ಲಿ ವಿನ್ಯಾಸಗೊಳಿಸಿದ ವಿಶೇಷ ಉತ್ಪನ್ನಗಳು ಮತ್ತು ಪರಿಹಾರಗಳಿಂದ ಪ್ರಯೋಜನ ಪಡೆಯಬಹುದು. ಈ ಲೌಂಜ್ ನಗರದಲ್ಲಿನ ಸ್ಟಾರ್ಟ್‌ಅಪ್ ಇಕೊಸಿಸ್ಟಂಗೆ ಮತ್ತಷ್ಟು ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು.

ಉತ್ತರ, ಪೂರ್ವ ಮತ್ತು ಮಧ್ಯ ಭಾರತ ಪ್ರದೇಶಗಳ ಜವಾಬ್ದಾರಿ ವಹಿಸಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್‌ನ ರೀಟೇಲ್ ಬ್ರಾಂಚ್ ಬ್ಯಾಂಕಿಂಗ್ ಮತ್ತು ಆಲ್ಟರ್ನೇಟ್ ಬ್ಯಾಂಕಿಂಗ್ ಚಾನೆಲ್ಸ್ ಅಂಡ್ ಪಾರ್ಟ್‌ನರ್‌ಶಿಪ್ಸ್ ಗ್ರೂಪ್ ಹೆಡ್ ಶ್ರೀ ಅರುಣ್ ಮೆಡಿರಟ್ಟ ಅವರು, “ಗೌಹಾಟಿ ಈಶಾನ್ಯ ಭಾರತದ ಸ್ಟಾರ್ಟ್‌ಅಪ್ ಇಕೊಸಿಸ್ಟಂನ ಪ್ರಮುಖ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಉದ್ಯಮಶೀಲತೆಯ ಚೈತನ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಇಲ್ಲಿ ಸ್ಟಾರ್ಟ್‌ಅಪ್ ಲೌಂಜ್ ಆರಂಭಿಸಲು ನಾವು ಅತ್ಯಂತ ಸಂತೋಷಪಡುತ್ತಿದ್ದೇವೆ. ಈ ಲೌಂಜ್‌ನ್ನು ಸ್ಟಾರ್ಟ್‌ಅಪ್ ಸಂಸ್ಥಾಪಕರು ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು, ಸಹಯೋಗ ಬೆಳೆಸಲು ಮತ್ತು ತಮ್ಮ ವ್ಯವಹಾರವನ್ನು ವಿಸ್ತರಿಸಲು ಪರಿಣಾಮಕಾರಿ ವೇದಿಕೆಯಾಗಿಸಿಕೊಳ್ಳಬಹುದು” ಎಂದು ಹೇಳಿದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ತನ್ನ ಸ್ಟಾರ್ಟ್‌ಅಪ್ ಬಿಲ್ಡ್‌ಅಪ್ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ವಿಶೇಷ ಸೇವೆಗಳು ಮತ್ತು ಉತ್ಪನ್ನಗಳನ್ನು ಒದಗಿಸುತ್ತಿದೆ. ಇದರಡಿ ಲಭ್ಯವಿರುವ ಪ್ರಮುಖ ಪರಿಹಾರಗಳಲ್ಲಿ ಸ್ಟಾರ್ಟ್‌ಅಪ್ ಬ್ಯಾಂಕಿಂಗ್ ಚಾಲ್ತಿ ಖಾತೆ, ‘ಕಲೆಕ್ಟ್ ನೌ’ ಡಿಜಿಟಲ್ ಕಲೆಕ್ಷನ್ ಮತ್ತು ಪೇಮೆಂಟ್ಸ್ ಪರಿಹಾರಗಳು, ಟ್ರೇಡ್ ಫೊರೆಕ್ಸ್ ಮತ್ತು ಆಫ್‌ಶೋರ್ ಬ್ಯಾಂಕಿಂಗ್, ವಾಣಿಜ್ಯ ಕಾರ್ಡ್‌ಗಳು, ಇಎಸ್‌ಒಪಿ ಟ್ರಸ್ಟ್ ಮತ್ತು ಶೇರ್ ಕ್ಯಾಪಿಟಲ್ ಖಾತೆ, ಕಸ್ಟಮೈಸ್ ಮಾಡಿದ ಆರೋಗ್ಯ ವಿಮೆ, ಉದ್ಯೋಗಿಗಳ ವೇತನ ಖಾತೆಗಳು ಹಾಗೂ ಅರ್ಹತಾ ಮಾನದಂಡಗಳಿಗೆ ಒಳಪಟ್ಟಂತೆ ಸ್ಟಾರ್ಟ್‌ಅಪ್‌ಗಳಿಗೆ ಕೇಂದ್ರ ಸರ್ಕಾರದ ಸೆಂಟ್ರಲ್ ಗ್ಯಾರೆಂಟಿ ಸ್ಕೀಮ್ (CGSS) ಅಡಿಯಲ್ಲಿ ಸಾಲ ಸೌಲಭ್ಯಗಳು ಸೇರಿವೆ.

ಬ್ಯಾಂಕ್ ಸ್ಟಾರ್ಟ್‌ಅಪ್‌ಗಳೊಂದಿಗೆ ಸಕ್ರಿಯ ಸಹಯೋಗವನ್ನು ಮುಂದುವರೆಸುತ್ತಿದೆ. 2024ರಲ್ಲಿ ಪರಿಚಯಿಸಲಾದ ಟೆಕ್ ಇನೋವರ್ಸ್ ಉಪಕ್ರಮವು ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರೂಪ್ ಮಟ್ಟದ ವೇದಿಕೆಯಾಗಿದ್ದು, ವಿವಿಧ ವಲಯಗಳಲ್ಲಿ ನವೀನತೆಯನ್ನು ಗುರುತಿಸಿ ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದೆ. ಈ ಉಪಕ್ರಮವು ಪ್ರಸ್ತುತ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಪಾವತಿಗಳು, ಸಾಲ, ಎಪಿಐ ಅಭಿವೃದ್ಧಿ, ರೀಟೇಲ್ ಹಾಗೂ ಕಾರ್ಪೊರೇಟ್ ಗ್ರಾಹಕರ ಪರಿಹಾರಗಳು ಮತ್ತು ಏಜೆಂಟಿಕ್ ಎಐ ಪ್ರಾಜೆಕ್ಟ್‌ಗಳ ಕ್ಷೇತ್ರಗಳಲ್ಲಿ ಹಲವು ಸ್ಟಾರ್ಟ್‌ಅಪ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಇದಲ್ಲದೆ, ಸರ್ಕಾರದ CGSS ಯೋಜನೆ ಹಾಗೂ ಬ್ಯಾಂಕಿನ CSR ಕಾರ್ಯಕ್ರಮ – ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ಮೂಲಕ ಸ್ಟಾರ್ಟ್‌ಅಪ್ ಇಕೊಸಿಸ್ಟಂಗೆ ಮಹತ್ವದ ಕೊಡುಗೆ ನೀಡುತ್ತಿದೆ. ಈ ಎಲ್ಲಾ ಉಪಕ್ರಮಗಳು ಭಾರತವನ್ನು ಜಾಗತಿಕ ಸ್ಟಾರ್ಟ್‌ಅಪ್ ಹಬ್ ಆಗಿ ರೂಪಿಸುವ ದಿಕ್ಕಿನಲ್ಲಿ ಬ್ಯಾಂಕಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

About HDFC BANK

For more information, click here: www.hdfc.bank.in

For media queries please contact:

Madhu Chhibber
Head – Corporate Communications
HDFC Bank Limited
Mobile: +91 98337 75515
Email: madhu.chhibber@hdfc.bank.in

Sakshi Denis
Deputy Vice President – Corporate Communications
HDFC Bank Limited
Mobile: +91 9560220405
Email: sakshi.denis@hdfc.bank.in

LEAVE A REPLY

Please enter your comment!
Please enter your name here