ಎಚ್.ಡಿ.ಎಫ್.ಸಿ. ಪರಿವರ್ತನ್ ನ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಉನ್ನತೀಕರಣ ಕಾರ್ಯಕ್ರಮದಲ್ಲಿ 7.2 ಲಕ್ಷಕ್ಕೂ ಹೆಚ್ಚು ಯುವಜನರಿಗೆ ತರಬೇತಿ

0
21


ಮುಂಬೈ: ವಿಶ್ವ ಯುವ ಕೌಶಲ್ಯಗಳ ದಿನದಂದು ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಬ್ಯಾಂಕಿನ ಸಿ.ಎಸ್.ಆರ್. ಕಾರ್ಯಕ್ರಮ ಪರಿವರ್ತನ್ ಪ್ರಾರಂಭವಾದ ದಿನದಿಂದಲೂ ಇಲ್ಲಿಯವರೆಗೆ ಭಾರತದಾದ್ಯಂತ 7.2 ಲಕ್ಷಕ್ಕೂ ಹೆಚ್ಚು ಜನರಿಗೆ ಕೌಶಲ್ಯಗಳ ತರಬೇತಿಯ ಮೈಲಿಗಲ್ಲು ಸಾಧಿಸಿರುವುದನ್ನು ಪ್ರಕಟಿಸಿದೆ. ಬ್ಯಾಂಕ್ ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಐಟಿ/ಐಟಿಇಎಸ್, ರೀಟೇಲ್, ಆರೋಗ್ಯಸೇವೆ, ಉತ್ಪಾದನೆ ಮತ್ತು ಕೃಷಿ ಕ್ಷೇತ್ರ ಒಳಗೊಂಡು ಕೌಶಲ್ಯಾಭಿವೃದ್ಧಿಯ ಕ್ಷೇತ್ರದಲ್ಲಿ 70ಕ್ಕೂ ಹೆಚ್ಚು ಸಕ್ರಿಯ ಯೋಜನೆಗಳನ್ನು ಹೊಂದಿದೆ.
ಬ್ಯಾಂಕಿನ ಎಲ್ಲ ಸಿ.ಎಸ್.ಆರ್. ಚಟುವಟಿಕೆಗಳ ಬ್ರಾಂಡ್ ಪರಿವರ್ತನ್ ಕಾರ್ಯಕ್ರಮದ ಪ್ರಮುಖ ಆದ್ಯತೆಯ ವಲಯವೆಂದರೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಉನ್ನತೀಕರಣ. ಇದರ ಉಪಕ್ರಮಗಳು ಎರಡು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಿವೆ:
a) ಉದ್ಯೋಗಸೃಷ್ಟಿಗೆ ಕೌಶಲ್ಯಾಭಿವೃದ್ಧಿ ಮತ್ತು
b) ಗ್ರಾಮೀಣ ಸಮುದಾಯಗಳಿಗೆ ಉದ್ಯಮಶೀಲತೆಗೆ ಒತ್ತು ನೀಡಿ ಜೀವನೋಪಾಯ ಉನ್ನತೀಕರಣ
ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಮೂರರಿಂದ ಆರು ತಿಂಗಳವರೆಗೆ ನಡೆಸಲಾಗುವ ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ ಫ್ರೇಮ್ವರ್ಕ್ (ಎನ್.ಎಸ್.ಕ್ಯೂ.ಎಫ್.) ಗೆ ಪೂರಕವಾದ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನೀಡಲಾಗುತ್ತದೆ. ಅದರಲ್ಲಿ ಫೈನಾನ್ಸ್ ಅಂಡ್ ಬಿಸಿನೆಸ್ ಸರ್ವೀಸಸ್, ಕನ್ಸ್ಟ್ರಕ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್, ಬ್ಯೂಟಿ ಅಂಡ್ ವೆಲ್ನೆಸ್, ಅಪೇರೆಲ್ ಅಂಡ್ ಟೆಕ್ಸ್ಟೈಲ್ಸ್ ಮತ್ತು ಎಜುಕೇಷನ್ ಅಂಡ್ ಟ್ರೈನಿಂಗ್ ಒಳಗೊಂಡಿವೆ. ಈ ಕಾರ್ಯಕ್ರಮಗಳು ಶೇ.60ರಿಂದ ಶೇ.70ರಷ್ಟು ನೇಮಕಾತಿ ಪ್ರಮಾಣಗಳನ್ನು ಸಾಧಿಸಿವೆ.
ಬ್ಯಾಂಕ್ ನ ಕೌಶಲ್ಯ ಕೇಂದ್ರಗಳಿಗೆ ಹೊಸ ಸೇರ್ಪಡೆ ಎಂದರೆ ಜೈಪುರದ ಪರಿವರ್ತನ್ ಸ್ಕಿಲ್ಸ್ ಅಕಾಡೆಮಿ, ಇದು ಸ್ಥಳೀಯವಾಗಿ ಪ್ರಸ್ತುತವಾಗಿರುವ ತರಬೇತಿ ಮಾರ್ಗಗಳನ್ನು ಒದಗಿಸುತ್ತಿದ್ದು ಅದು ಸುಸ್ಥಿರ ಉದ್ಯೋಗ ಮತ್ತು ಉದ್ಯಮಶೀಲತೆ ನೀಡುತ್ತದೆ. ಈ ಅಕಾಡೆಮಿಯು ಭಾರತದಾದ್ಯಂತ ವಿಸ್ತಾರ ಜಾಲದ ಭಾಗವಾಗಿದ್ದು ಅದರ ಮೂಲಕ ಎಚ್.ಡಿ.ಎಫ್.ಸಿ. ಬ್ಯಾಂಕ್ ಮುಂದಿನ ವರ್ಷಗಳಲ್ಲಿ 2 ಲಕ್ಷ ಯುವಜನರಿಗೆ ಕೌಶಲ್ಯ ನೀಡುವ ಗುರಿ ಹೊಂದಿದೆ.
ಇದರೊಂದಿಗೆ ರೈತರು, ಸ್ವಯಂ-ಸೇವಾ ಗುಂಪುಗಳು ಮತ್ತು ಸಮುದಾಯ ಆಧರಿತ ಉದ್ಯಮಗಳು ಸೇರಿ ಆರು ಲಕ್ಷ ವ್ಯಕ್ತಿಗಳು ಈ ಪರಿವರ್ತನ್ ಜೀವನೋಪಾಯ ಉನ್ನತೀಕರಣ ಮತ್ತು ಉದ್ಯಮಶೀಲತೆಯ ಉಪಕ್ರಮಗಳಿಂದ ಪ್ರಯೋಜನ ಪಡೆದುಕೊಂಡಿದ್ದು ಸುಸ್ಥಿರ ಆರ್ಥಿಕ ಭಾಗವಹಿಸುವಿಕೆ ಉತ್ತೇಜಿಸುತ್ತಿದೆ. ಈ ಉಪಕ್ರಮಗಳ ಮೂಲಕ ಅಭಿವೃದ್ಧಿಗೊಳಿಸಲಾದ ಕೌಶಲ್ಯಗಳು ಕುರಿ ಸಾಕಾಣಿಕೆ, ಜೇನು ಸಾಕಣೆ, ಕೈಮಗ್ಗ ನೇಯ್ಗೆ, ಅಣಬೆ ಕೃಷಿ, ಎರೆಹುಳು ಗೊಬ್ಬರ ಮತ್ತು ಸಾವಯವ ಕೃಷಿ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ನ ಕೌಶಲ್ಯಾಭಿವೃದ್ಧಿ ಉಪಕ್ರಮಗಳು ಆಂಧ್ರ ಪ್ರದೇಶ, ಛತ್ತೀಸಗಢ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಹಾರಾಷ್ಟ್ರ, ಮಿಜೊರಾಂ, ಒಡಿಶಾ, ಪಂಜಾಬ್, ರಾಜಸ್ಥಾನ್, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಒಳಗೊಂಡು ಹಲವಾರು ರಾಜ್ಯಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹರಡಿವೆ.
ಕೌಶಲ್ಯಾಭಿವೃದ್ಧಿಯಲ್ಲಿ ಬ್ಯಾಂಕಿನ ಪ್ರಯತ್ನಗಳು ವಿಸ್ತಾರ ಹಿನ್ನೆಲೆಗಳ ಯುವಜನರನ್ನು ಒಳಗೊಳ್ಳುವ ಪ್ರಗತಿ ಮತ್ತು ಆರ್ಥಿಕ ಸಬಲೀಕರಣಕ್ಕೆ ಬೆಂಬಲಿಸುತ್ತವೆ. ಈ ಬ್ಯಾಂಕಿನ ಎಲ್ಲರನ್ನೂ ಒಳಗೊಳ್ಳುವ ವಿಧಾನವನ್ನು 4,300ಕ್ಕೂ ಹೆಚ್ಚು ವಿಶೇಷ ಚೇತನ ವ್ಯಕ್ತಿಗಳ ತರಬೇತಿಯಲ್ಲಿ ಕಾಣಬಹುದು.
ಕೌಶಲ್ಯ ತರಬೇತಿ ನೀಡುವುದರೊಂದಿಗೆ ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ಯುವಜನರಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಉತ್ತೇಜನ ನೀಡಲು ಯುವ ಉದ್ಯಮಶೀಲತೆಯ ಪ್ರಸ್ತುತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಈ ಪ್ರಯತ್ನಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದ್ದು ಅದು ಘನತೆಯ ಕೆಲಸ ಮತ್ತು ಆರ್ಥಿಕ ಪ್ರಗತಿ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಮತ್ತು ವಾತಾವರಣದ ಕ್ರಮ ಒಳಗೊಂಡಿದೆ.
ವಿಶ್ವ ಯುವ ಕೌಶಲ್ಯಗಳ ದಿನವನ್ನು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಲಾಗಿದ್ದು ಅದು ಯುವಜನರನ್ನು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಉದ್ಯೋಗ ಮತ್ತು ಉದ್ಯಮಶೀಲತೆಯ ಕೌಶಲ್ಯಗಳೊಂದಿಗೆ ಸನ್ನದ್ಧಗೊಳಿಸುವ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ.
About HDFC Bank Parivartan: Please click here: www.hdfcbank.com

LEAVE A REPLY

Please enter your comment!
Please enter your name here