ಆಳ್ವಾಸ್ ಆಯುರ್ವೇದ ಕಾಲೇಜಿನ ಬಾಲರೋಗ ಸಂಬಂಧಿತ ಉಪನ್ಯಾಸಕರಾದ ಜಿತೇಶ್ ಎಂ ಡಿ ಅವರು ರಾಜೇಶ್ವರಿ ರಾಷ್ಟ್ರೀಯ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ಸಂಬಂಧಿತ ಮಾಹಿತಿಯೊಂದಿಗೆ ಸ್ವಚ್ಛತೆ ಹಾಗೂ ದಿನನಿತ್ಯದ ಕಾರ್ಯಗಳಲ್ಲಿ ಉತ್ತಮ ಆರೋಗ್ಯವನ್ನು ಬೆಳೆಸಿಕೊಳ್ಳುವ ಮಾಹಿತಿಯನ್ನು ನೀಡಿದರು. ಹುಡುಗಿಯರಿಗೆ ಅವರ ಸಂಬಂಧಿತ ಆರೋಗ್ಯ ಮಾಹಿತಿಯನ್ನು ಪ್ರತಿಭಾ ಜಿ ಅವರು ನೀಡಿದರು.
ರಾಜೇಶ್ವರಿ ಪಿ ಯು ಕಾಲೇಜಿನ ಕಾರ್ಯದರ್ಶಿ ಶ್ವೇತಾ ಶೆಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ ಸಚಿನ್ ವಂದಿಸಿದರು.

ವರದಿ ರಾಯಿ ರಾಜ ಕುಮಾರ

