ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಧೀಮಂತ ಪ್ರಧಾನ ಗುರುಗಳಾದ ಕೊರವರವರಿಗೆ ಹೃದಯಸ್ಪರ್ಶಿ ಸನ್ಮಾನ

0
148

ಭಾರತ ರತ್ನ ಡಾ ಎಸ್. ರಾಧಾಕೃಷ್ಣನ್ ರವರ ಜಯಂತಿ ನಿಮಿತ್ತ ಸಪ್ಟೆಂಬರ್ 5ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಹಾಗೂ ಪ್ರಾಥಮಿಕ ವ ಪ್ರೌಢ ಶಾಲಾ ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪ ನವರಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷ ಪ್ರಶಸ್ತಿ ಸ್ವೀಕರಿಸಿ ಧಾರವಾಡದ ಹಿರಿಮೆಯನ್ನು ಹೆಚ್ಚಿಸಿದ ಮುಖ್ಯ ಗುರುಗಳಾದ ಹೆಚ್. ಬಿ. ಕೊರವರ ರವರಿಗೆ ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರು ವ ಮಂಜುನಾಥ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಡಲ ಅಧಿಕಾರಿಗಳಾದ ಮಾನ್ಯ ಎಸ್. ಎಸ್. ಪಾಟೀಲರವರು ಡಯಟ್ ಪರವಾಗಿ ಸಪ್ಟೆಂಬರ್ 18ರಂದು ಪುಸ್ತಕ ಸಮರ್ಪಿಸಿ ಶಾಲು ಮಾಲೆಸಹಿತ ಶಾಲಾ ಪ್ರಾರ್ಥನಾ ಸಮಯದಲ್ಲಿ ಸನ್ಮಾನಿಸಿ, ಅವರ ಮಕ್ಕಳ ಕಲ್ಯಾಣ ಮತ್ತು ಶಾಲೆಯ ಸಮಗ್ರ ಅಭಿವೃದ್ಧಿ ಸಾಧನೆಯ ಕುರಿತು ಕ್ರಿಯಾಶೀಲ ಧೀಮಂತ ಪ್ರಧಾನಗುರುಗಳ ಶೈಕ್ಷಣಿಕ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.ಸಪ್ಟೆಂಬರ್ 13ರಂದು ಶಿವಶಂಕರ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಾಗವಾನ, ಸವಡಿ ಗುರುಮಾತೆ ಹಾಗೂ ಇನ್ನೂ ಹಲವು ಸಹೃದಯ ಶಿಕ್ಷಕರು ಮತ್ತು ಸಪ್ಟೆಂಬರ್ 15ರಂದು ವೀರಾಪೂರ ಓಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಬೆಳಹಾರ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಎಲ್. ಸಿ. ಹೊಸಮನಿ, ಮುರುಗೋಡ ವ ಶಶಿಕಲಾ ಎಚ್ ಗುರುಮಾತೆಯರು ಮತ್ತಿನ್ನಿತ ಆಪ್ತ ಶಿಕ್ಷಕರು ಮುತ್ತಿನ ಹಾರ ಹಾಕಿ ಫಲ ಪುಷ್ಪ ಬುಟ್ಟಿ ಸಹಿತ ಬಹು ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಶಾಲಾಭಿವೃದ್ಧಿಗಾಗಿ ಅಹರ್ನಿಶಿ ದುಡಿದ ಕೊರವರ ಗುರುಗಳ ತ್ಯಾಗ ಅರ್ಪಣಾ ಯೋಗದಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮತ್ತೋರ್ವ ಶಿಕ್ಷಣ ಪ್ರೇಮಿ ಕನ್ನಡ ಹೋರಾಟಗಾರರು ಗಂಗಾಧರ ಕಮಲದಿನ್ನಿಯವರು ಮೈಸೂರು ಪೇಟ ತೊಡಿಸಿ ಶಾಲು ಮಾಲೆ ಹಾಕಿ ಅಭಿನಂದಿಸಿ ಕೊರವರ ಗುರುಗಳ ಸಾರ್ಥಕ ಶೈಕ್ಷಣಿಕ ಸಾಧನೆಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಫಲಿಸಲೆಂದು ಶುಭ ಕೋರಿದರು. ನಿವೃತ್ತ ಪಶು ವೈದ್ಯರಾದ ನಾಡಗೌಡರರವರು ಸಹ ಬಲು ಅಭಿಮಾನದಿಂದ ಕೊರವರ ಗುರುಗಳನ್ನು ಸತ್ಕರಿಸಿದರು. ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಮುಂತಾದ ಸಂಘಟನೆಯವರು ಕೊರವರವರನ್ನು ಶುಭ ಕೋರಿದಗದಾರೆ. ಶಾಲಾ ಹಿರಿಯ ಶಿಕ್ಷಕಿಯರಾದ ಸಾವಿತ್ರಿ ಹರನಾಳ, ಮಂಜುಳಾ ಸಾತಪುತೆ, ಕುಸುಮಾ ಚಕ್ರಸಾಲಿ, ಸೈನಾಬಿ ನದಾಫ, ಸುಭಾಷ್ ಚವದಹಾಣ, ರೂಪ ಹೆಬ್ಬಳ್ಳಿ, ವಿಜಯಾ, ಪ್ರಕಾಶರವರು ಸಹ ತಮ್ಮ ಮುಖ್ಯ ಗುರುಗಳಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದಿಸಿದ್ದಾರೆ.ಧೀಮಂತ ಪ್ರದಾನ ಗುರು ಶಿಕ್ಷಕರತ್ನ, ಜನಮೆಚ್ಚಿದ ಶಿಕ್ಷ ವಿದ್ಯಾರ್ಥಿಗಳ ಪ್ರೇರಣಾದಾಯಿ ಹೆಚ್. ಬಿ.ಕೊರವರ ಗುರುಗಳು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇಯರಾಗಿದಕ್ಕೆ ಜಿಲ್ಲಾ (ಡಿಡಿಪಿಐ) ಉಪ ನಿರ್ದೇಶಕರಾದ ಕೇಳದಿಮಠ ಸಾಹೆಬ್ರು, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಎಚ್. ಎಮ್. ಫಡ್ನಿಸ್, ಕ್ಷೇತ್ರ ಸಮನ್ಯಾಧಿಕಾರಿಗಳಾದ ಅನಸೂಯಾ ಎಕ್ಕುಂಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭೀಮಪ್ಪ ಸುಣಗಾರ ಹಾಗೂ ಸರ್ವ ಸದಸ್ಯರು ಅಭಿನಂದಿಸಿಸ್ದಾರೆ. ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಹೇಮಂತ ಕುಂದರಗಿ ಅಧ್ಯಕ್ಷರಾದ ಜಂಗಳಿ, ಎಸ್. ಸಿ. ಎಸ್.ಟಿ ಶಿಕ್ಷಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶೇರೆವಾಡ, ತಾಲ್ಲೂಕು ಅಧ್ಯಕ್ಷರಾದ ಮೋತಿಲಾಲ ರಾಠೋಡ, ಕಾರ್ಯದರ್ಶಿಗಳಾದ ಬಿದರಿ, ಬಿಐಆರ್ಟಿಗಳಾದ ಗೇದಗೇರಿ, ಶಿಕ್ಷಕ ಮುಖಂಡರಾದ ಕುಬಿಹಾಳ, ಗುಡಿಹಾಳ ಆನಂದ ನಗರ ಸಿ.ಆರ್ಪಿಗಳಾದ ರವಿ ಬಂಗೇಣ್ಣವರ, ತಹಶಿಲ್ದಾರ, ಕೆಂಗಾಣ್ಣವರ ಮುಂತಾದವರು ಅಭಿನಂದಿಸಿದ್ದಾರೆ.

ಸುಭಾಷ್ ಚವ್ಹಾಣ, ಶಿಕ್ಷಕ ಹವ್ಯಾಸಿ ವರದಿಗಾರ, ಸ.ಹಿ.ಪ್ರಾ.ಶಾಲೆ. ಮಂಜುನಾಥ ನಗರ, ಹುಬ್ಬಳ್ಳಿ ಶಹರ

LEAVE A REPLY

Please enter your comment!
Please enter your name here