ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಗಾಳಿ ಮಳೆ ಮುಂದುವರಿದಿದೆ. ಹವಾಮಾನ ಇಲಾಖೆಯು ಇಂದು ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ಹಾಗೂ ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ನಿನ್ನೆ ದಕ್ಷಿಣ ಕನ್ನಡದಲ್ಲಿ 2 ಮನೆ ಸಂಪೂರ್ಣವಾಗಿ ಮತ್ತು 7 ಮನೆಗಳಿಗೆ ಭಾಗಶ: ಹಾನಿಯಾಗಿದೆ. 25 ವಿದ್ಯುತ್ ಕಂಬ, 13 ಟ್ರಾನ್ಸ್ ಫಾರ್ಮರ್, 11.250 ಕಿ.ಮೀ. ವಿದ್ಯುತ್ ತಂತಿಗೆ ಹಾನಿಯಾಗಿದೆ. 25 ಜನರ ಎನ್.ಡಿ.ಆರ್.ಎಫ್. ತಂಡ ಪುತ್ತೂರಿನಲ್ಲಿ, 15 ಜನರ ಎಸ್.ಡಿ.ಆರ್.ಎಫ್. ತಂಡ ಮಂಗಳೂರಿನಲ್ಲಿ, 10 ಮಂದಿಯ ತಂಡ ಸುಬ್ರಹ್ಮಣ್ಯದಲ್ಲಿ ಹಾಗೂ 25 ಬೋಟ್ ಗಳು ರಕ್ಷಣೆಗೆ ಸನ್ನದ್ಧವಾಗಿವೆ.
ಉಡುಪಿ ಜಿಲ್ಲೆಯಲ್ಲಿ 50 ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. 2 ಟ್ರಾನ್ಸ್ ಫಾರ್ಮರ್ ಗಳು ಕೆಟ್ಟು ಹೋಗಿವೆ.