ಹೆಬ್ರಿ : ವಿಶ್ವ ಮಹಿಳಾ ದಿನಾಚರಣೆ

0
8

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ವತಿಯಿಂದ ಕಬ್ಬಿನಾಲೆ ಗ್ರಾಮದ ಮೆದಿಪು ನಿವಾಸಿ ನಾಟಿ ವೈದ್ಯೆ, 2025 ನೇ ಸಾಲಿನ ಕರ್ನಾಟಕ ಜಾನಪದ ಅಕಾಡಮಿಯ ವಾರ್ಷಿಕ ಜಾನಪದ ಗೌರವ ಪ್ರಶಸ್ತಿ ಪಡೆದ ಗುಲಾಬಿ ಗೌಡ್ತಿ ಯವರನ್ನು ಅವರ ಸ್ವಗೃಹದಲ್ಲಿ ಮಾ 8 ರಂದು ಸನ್ಮಾನಿಸಲಾಯಿತು.

ಅಲಯನ್ಸ್ ಕ್ಲಬ್ ಹೆಬ್ರಿ ಯ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್, ಕಾರ್ಯದರ್ಶಿ ಬಾಲಚಂದ್ರ ಎಂ. ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಯ ಅಧ್ಯಕ್ಷೆ ಸುನೀತ ಹೆಬ್ಬಾರ್ ರವರು ಗುಲಾಬಿ ಗೌಡ್ತಿ ಯವರನ್ನು ಸನ್ಮಾನಿಸಿದರು. ಸದಸ್ಯರಾದ ಪುಷ್ಪಾವತಿ ಶೆಟ್ಟಿ ಮತ್ತು ರತ್ನಾವತಿ ನಾಯಕ್ ರವರು ಹಾಗೂ ಸ್ಥಳೀಯರಾದ ಸದಾನಂದ ರಾವ್ ಉಪಸ್ಥಿತರಿದ್ದರು.

ಹಲವಾರು ವರ್ಷಗಳಿಂದ ವಿಷ ಹಾವು ಕಡಿತ,ಜ್ವರ, ಮಹಿಳೆಯರ ಕೆಲವೊಂದು ಸಮಸ್ಯೆಗೆ, ತಲೆ ಕೂದಲು ಉದುರುವಿಕೆ, ಚರ್ಮ ರೋಗಕ್ಕೆ ನಾಟಿ ಔಷಧಿ ನೀಡುತ್ತಿದ್ದು, 89 ವರ್ಷದ ಅವರು ವಯೋಸಹಜವಾಗಿ ಅಸೌಖ್ಯದಿಂದ ಬಳಲುತ್ತಿದ್ದು ಮತ್ತು ಕಣ್ಣಿನ ಸಮಸ್ಯೆಯಿಂದಾಗಿ ನಾಟಿ ಔಷಧ ನೀಡುವ ಕಾಯಕಕ್ಕೆ ಇದೀಗ ವಿದಾಯ ನೀಡಿರುವರು.

ಬಡತನದಲ್ಲೂ ಅವರು ನೀಡಿದ ಸೇವೆಯನ್ನು ಗುರುತಿಸಿ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here