ಹೆಬ್ರಿ: ನಾಳೆ (ಆ. 24) ಅಷ್ಟಮಿದ ಕೆಸರ್ದ ಓಕುಳಿ

0
142

ಹೆಬ್ರಿ: ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್, ಎಸ್.ಆರ್ ಶಿಕ್ಷಣ ಸಂಸ್ಥೆ ಹೆಬ್ರಿ, ಜಿ. ಎಸ್. ಬಿ ಯುವಜನ ಸಭಾ ಹೆಬ್ರಿ ಇವರ ಸಹಕಾರದೊಂದಿಗೆ ಅಷ್ಟಮಿದ ಕೆಸರ್ದ ಓಕುಳಿ ಎಂಬ ಕಾರ್ಯಕ್ರಮ ಆಗಸ್ಟ್ 24 ರಂದು ಹೆಬ್ರಿಯ ಅರ್ಧ ನಾರೀಶ್ವರ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ, ಹಾಗೂ ಮಹಿಳೆಯರ ತ್ರೋ ಬಾಲ್ ಹಾಗೂ ಹಲವಾರು ಆಟೋಟ ಸ್ಪರ್ಧೆಗಳು, ಮಡಿಕೆ ಒಡೆಯುವ ಸ್ಪರ್ಧೆ ಹಾಗೂ ಮಕ್ಕಳಿಗೆ ವಿವಿಧ ಅತೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here