ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ. ಪೂ ಕಾಲೇಜು, ಹೆಬ್ರಿ ಇಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವು ಪರಿವರ್ತನಾ ಟ್ರಸ್ಟ್ ವತಿಯಿಂದ ನಡೆಯಿತು.
ರಥ ಯಾತ್ರೆಯ ಮೂಲಕ ಸಾಗಿ ಬಂದ ಇದರ ಮುಖ್ಯಸ್ಥರನ್ನು ಕಾಲೇಜಿನ ವಿದ್ಯಾರ್ಥಿಗಳು ಇಕ್ಕೆಲಗಳಲ್ಲಿ ನಿಂತು ಸ್ವಾಗತಿಸಿದರು. ರಥದಲ್ಲಿದ್ದ ಭಾರತ ಮಾತೆಯ ಭಾವಚಿತ್ರಕ್ಕೆ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ಗುರುದಾಸ್ ಶೆಣೈ ಮತ್ತು ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಜೋಗಿ ಪುಷ್ಪ ನಮನ ಸಲ್ಲಿಸಿದರು.
ಹೆಬ್ರಿ ಆರಕ್ಷಕ ಠಾಣೆಯ ಠಾಣಾಧಿಕಾರಿ ರವಿ ಉದ್ಘಾಟಿಸಿ , ಟ್ರಗ್ಸ್ ಕೇಸಲ್ಲಿ ಸಿಕ್ಕಿಬಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ವಿಧ್ಯಾರ್ಥಿಗಳು ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗಬಾರದೆಂದು ಎಚ್ಚರಿಕೆ ನುಡಿಗಳನ್ನು ಆಡಿದರು. ಈ ಅಭಿಯಾನದ ಉಸ್ತುವಾರಿ ವಹಿಸಿರುವ ಸಂದೇಶ್ ಡ್ರಗ್ಸ್ ಜಾಲ ಯುವಜನತೆಯನ್ನು ವಿವಿಧ ರೀತಿಯಲ್ಲಿ ಆಕರ್ಷಿಸುತ್ತಿದೆ. ದೇಶಕಟ್ಟುವ ಯುವ ಮನಸ್ಸುಗಳು ಇಂತಹ ಆಕರ್ಷಣೆಗಳಿಗೆ ವಿಚಲಿತವಾಗದೆ ಸಾಧನೆಯ ಕಡೆಗೆ ಗುರಿ ನೇರವಾಗಿ ಇರಬೇಕು ಎಂದು ಕರೆ ಕೊಟ್ಟರು. ಕಾಲೇಜಿನ ವಿದ್ಯಾರ್ಥಿ ನಾಯಕ ಆದಿತ್ಯ, ವಿದ್ಯಾರ್ಥಿಗಳಾದ ಅನ್ನಪೂರ್ಣ ಮತ್ತು ಸೃಷ್ಟಿ ಡ್ರಗ್ಸ್ ಜಾಲದ ವಿರುದ್ಧ ದ್ವನಿ ಎತ್ತಿದರು. ಈ ಅಭಿಯಾನದ ಪ್ರಮುಖರಾದ ಸುದೀಪ್ ಕಡಿಯಾಳಿ, ಆದರ್ಶ ಆಚಾರ್ಯ, ರತ್ನಾಕರ ಕೋಟ್ಯಾನ್ ಮತ್ತು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಮತ್ತು ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪ್ರಕಾಶ್ ಜೋಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ಉಪನ್ಯಾಸಕ , ವೀಣೆಶ್ ಅಮೀನ್ ನಿರೂಪಿಸಿ , ಸ್ವಾಗತಿಸಿ , ವಂದಿಸಿದರು.


