ಹೆಬ್ರಿ: ಮುದ್ರಾಡಿ ರಿಕ್ಷಾ ನಿಲ್ದಾಣ ಎದುರು ರಸ್ತೆ ಬದಿ ಇರಿಸಿದ್ದ ಬ್ಯಾರಿಕೇಡ್‌ಗೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಮೃತಪಟ್ಟ ಘಟನೆ ಅ.25ರಂದು ವರದಿಯಾಗಿದೆ.
ಮುದ್ರಾಡಿ ನಿವಾಸಿ ಹರೀಶ (45) ಮೃತಪಟ್ಟವರು. ಡಿಕ್ಕಿಯ ಪರಿಣಾಮ ಹರೀಶ್‌ರವರು ರಸ್ತೆಗೆ ಬಿದ್ದು ಬಲ ಕಿವಿ ಹಾಗೂ ತಲೆಯ ಹಿಂಭಾಗ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಹಾಗೂ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ದಾಖಲಿಸಿದ್ದು, ಹರೀಶರವರು ಚಿಕಿತ್ಸೆಗೆ ಸ್ಪಂದಿಸದೆ ಅ. 27ರಂದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

