ಹೆಬ್ರಿ : ಜೀರ್ಣೋದ್ದಾರ ಕಾಮಗಾರಿಯ ಮನವಿ ಪತ್ರ ಬಿಡುಗಡೆ

0
72

ಹೆಬ್ರಿ : ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಅಮ್ಮನವರ ದೇವಸ್ಥಾನ ಬಚ್ಚಪ್ಪು ಹೆಬ್ರಿ, ಇದರ ನೂತನ ಶಿಲಾಮಯ ಗರ್ಭಗುಡಿ ಹಾಗೂ ಇನ್ನಿತರ ಕಾಮಗಾರಿ ಕುರಿತು ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು. ನಾವೆಲ್ಲರೂ ಸೇರಿಕೊಂಡು ಯಾವುದೇ ಪರಬೇದವಿಲ್ಲದೇ ತಾಯಿಯ ಜೀರ್ಣೋದ್ದಾರ ಕಾರ್ಯಕ್ಕೆ ಕೈ ಜೋಡಿಸೋಣ, ಈ ಒಂದು ಪುಣ್ಯ ಕಾರ್ಯದಲ್ಲಿ ಎಲ್ಲಾ ಭಗವದ್ಭಕ್ತರು ಸಹಕಾರ ನೀಡಬೇಕೆಂದು ಹೆಬ್ರಿ ವ್ಯ. ಸೇ. ಸ. ಸಂಘದ ಅಧ್ಯಕ್ಷರಾದ ನವೀನ್ ಕೆ. ಆಡ್ಯಾoತಾಯ ತಿಳಿಸಿದರು. ಈ ಸಂದರ್ಭದಲ್ಲಿ ಹೆಬ್ರಿ ಗ್ರಾ. ಪಂ. ಅಧ್ಯಕ್ಷರಾದ ತಾರಾನಾಥ ಬಂಗೇರ, ಹೆಚ್. ಗಣೇಶ್ ಕುಮಾರ್, ರಾಘವೇಂದ್ರ ನಾಯ್ಕ, ಆಶಾ ಕರುಣಾಕರ ಹೆಗ್ಡೆ, ತಂತ್ರಿಗಳಾದ ಬಾಲಕೃಷ್ಣ ಭಟ್, ಅರ್ಚಕರಾದ ಅಣ್ಣೋಜಿ ನಾಯ್ಕ, ಹರೀಶ್ ಶೆಟ್ಟಿಗಾರ್ ಮತ್ತಿತರ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮಹಾಬಲ ನಾಯ್ಕ ಪ್ರಸ್ತಾವನೆಗೈದು ಹಾಗೂ ಸ್ವಾಗತಿಸಿ, ಸುರೇಶ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here