ಹೆಬ್ರಿ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ : ಆಮಂತ್ರಣ ಪತ್ರಿಕೆ ಅನಾವರಣ

0
6

ಶೇಡಿಮನೆ ಅರಸಮ್ಮಕಾನು ದೇವಸ್ಥಾನದಲ್ಲಿ ಮಾ.1ರಂದು ನಡೆಯಲಿರುವ ಹೆಬ್ರಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಇತ್ತೀಚೆಗೆ ನಡೆಯಿತು. ಶ್ರೀಕ್ಷೇತ್ರ ಅರಸಮ್ಮಕಾನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ಮೋಹನದಾಸ ಹೆಗ್ಡೆ ಕುದ್ರುಬೀಡು ಅವರ ಬಿಡುಗಡೆಗೊಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉದ್ಯಮಿಗಳಾದ ಯೋಗೀಶ್ ಭಟ್ ಹೆಬ್ರಿ, ಸ್ವಾಗತ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯಾಧ್ಯಕ್ಷ ಶಂಕರ ಪೂಜಾರಿ, ಸಂಚಾಲಕ ರಾಧಾಕೃಷ್ಣ ಕ್ರಮಧಾರಿ, ಗೌರವಾಧ್ಯಕ್ಷ ನಾಗರಾಜ ಬಾಯಾರಿ ಪಾಲ್ಗೊಂಡಿದ್ದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ ಶೆಟ್ಟಿ ಮಡಾಮಕ್ಕಿ ಸ್ವಾಗತಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ್ ಕೆ ಶಿವಪುರ ವಂದಿಸಿದರು. ಪದಾಧಿಕಾರಿ ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here