ಹೆಬ್ರಿ : ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘ (ರಿ.) ಇವರ ಆಶ್ರಯದಲ್ಲಿ ಹೆಬ್ರಿ ಸೀತಾನದಿಯ ದುಡ್ಡಿನಜೆಡ್ದು ಎಂಬಲ್ಲಿ ಆಟಿಡೊಂಜಿ ಕೂಟೊಡು ಕೆಸರ್ದ ಗೊಬ್ಬು ಕಾರ್ಯಕ್ರಮವು ರಂದು ಜು. ೨೦ರಂದು ನೆಡೆಯಿತು
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಂಬೈನ ಉದ್ಯಮಿಗಳಾದ ವಿಶ್ವನಾಥ ಹೆಗ್ಡೆ ಚಂದುಕುಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಗ್ಡೆ ವಹಿಸಿದ್ದರು, ವೇದಿಕೆಯಲ್ಲಿ ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ (ರಿ) ಕೋಟೆಬಾಗಿಲು ಮೂಡುಬಿದ್ರೆ ಇದರ ಅಧ್ಯಕ್ಷರಾದ ನವೀನ್. ಎನ್. ಹೆಗ್ಡೆ, ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಮೂಡುಬಿದ್ರೆ ಇಲ್ಲಿನ ಆಡಳಿತ ಮೊಕ್ತೇಸರಾದ ಉದಯ್ ಕುಮಾರ್ ಹೆಗ್ಡೆ ಯರ್ಲಪಾಡಿ, ಕೃಷಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಹೆಗ್ಡೆ, ದ.ಕ.ಹೆಗ್ಗಡೆ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ನಂದ ಕುಮಾರ್ ಹೆಗ್ಡೆ, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ, ಹೆಬ್ರಿ ವಲಯ ಹೆಗ್ಗಡೆ ಸಮಾಜದ ಗೌರವಾಧ್ಯಕ್ಷರಾದ ಸುಧಾಕರ ಹೆಗ್ಡೆ, ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಮೂಡುಬಿದ್ರೆ ಇಲ್ಲಿನ ಮೊಕ್ತೇಸರರಾದ ಸಂದೀಪ್ ಹೆಗ್ಡೆ, ನಿವೃತ್ತ ಶಿಕ್ಷಕ ಹರಿದಾಸ ಹೆಗ್ಡೆ, ನಿವೃತ್ತ ಶಿಕ್ಷಕಿ ಪ್ರಭಾವತಿ ಆನಂದ ಹೆಗ್ಡೆ, ಕಡ್ತಲ ಗ್ರಾ.ಪಂ ಅಧ್ಯಕ್ಷರಾದ ಸುಕೇಶ್ ಹೆಗ್ಡೆ, ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಇಲ್ಲಿನ ಕಾರ್ಯದರ್ಶಿ ಶಂಕರ ಹೆಗ್ಡೆ, ಉದ್ಯಮಿ ರವಿಚಂದ್ರ ಹೆಗ್ಡೆ, ಉದ್ಯಮಿ ಜಗದೀಶ್ಚಂದ್ರ ಹೆಗ್ಡೆ, ಮುಖ್ಯೋಪಾಧ್ಯಯರಾದ ವಿಜಯ್ ಹೆಗ್ಡೆ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಲತಾ ಗಂಗಾಧರ ಹೆಗ್ಡೆ ನಿರೂಪಿಸಿದರು.
ಹೆಗ್ಗಡೆ ಸಮಾಜದ ಶಾಲಾ ಬಾಲಕ ಬಾಲಕಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ಕೆಸರುಗದ್ದೆ ಓಟ, ಹಾಳೆಬಂಡಿ ಓಟ, ಉಪ್ಪಿನ ಮೂಟೆ ಓಟ, ಮೂರುಕಾಲಿನ ಓಟ, ದಂಪತಿ ಓಟ, ನಿಧಿ ಶೋಧ,ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳು ಜರುಗಿದವು.