ವರದಿ ರಾಯಿ ರಾಜ ಕುಮಾರ
ದಕ್ಷಿಣ ಕನ್ನಡ ಜಿಲ್ಲಾ ಹೆಗಡೆ ಸಮಾಜ ಸಂಘ ಮತ್ತು ಮೂಡುಬಿದಿರೆ ಕೋಟೆ ಬಾಗಿಲು ವೀರ ಮಾರುತಿ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಕ್ಟೋಬರ್ 26ರಂದು ಮೂಡುಬಿಗೆರೆ ಕೋಟೆಬಾಗಿಲು ವೀರ ಮಾರುತಿ ಕಲಾಮಂದಿರದಲ್ಲಿ ನಡೆಯಿತು. ಮಂಗಳೂರಿನ ಖ್ಯಾತ ನೇತೃ ತಜ್ಞ ಪ್ರೊಫೆಸರ್ ಡಾಕ್ಟರ್ ಸುಧೀರ್ ಹೆಗಡೆ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉತ್ತಮ ಬದುಕಿನ ಸಾಕ್ಷಾತ್ಕಾರಕ್ಕೆ ಆಸಕ್ತಿ, ಪರಿಶ್ರಮ, ತಾಳ್ಮೆ ಹಾಗೂ ನಿರಂತರ ಕಲಿಕೆಯ ಅಗತ್ಯವಿದೆ. ವಿದ್ವತ್ತಿಗೆ ಯಾವಾಗಲೂ ಗೌರವ ಕಟ್ಟಿಟ್ಟದ್ದು. ಉತ್ತಮ ಸಹಪಾಠಿಗಳು ಹಾಗೂ ಶಿಕ್ಷಕರಿಂದ ಸಾಕಷ್ಟು ವಿದ್ಯೆಯ ಅನುಭವವನ್ನು ಪಡೆದು ಸಿಕ್ಕಿದ ಕ್ಷೇತ್ರದ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಏಳು ಮಂದಿ ಕ್ರೀಡೆ, ನಾಟ್ಯ, ಕರಾಟೆ, ವಿದ್ವತ್ ಕ್ಷೇತ್ರಗಳಲ್ಲಿ ಪ್ರತಿಭಾವಂತರಾದ ಸಮೀಕ್ಷಾ, ಅಜೇಯ, ಶಯನ, ಆರೋಹಿ, ಪ್ರತೀಶ್ , ಮನಸ್ವಿ, ಶೈಲಾ ಹೆಗ್ಡೆಯವರುಗಳನ್ನು ಸನ್ಮಾನಿಸಲಾಯಿತು. ಸದಾಶಿವ ಹೆಗ್ಡೆ ಹೆಸರು ವಾಚಿಸಿದರು.

ಸಂಘದ ಅಧ್ಯಕ್ಷ ಪ್ರಭಾಕರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ ಅತಿಥಿಗಳಾಗಿ ಮಾತನಾಡಿದರು. ವೇದಿಕೆಯಲ್ಲಿ ದೇವಾಲಯದ ಆಡಳಿತ ಮುಖ್ಯಸ್ಥರ ಶ್ಯಾಮ ಹೆಗ್ಡೆ, ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ತಾರಾಮತಿ ಹೆಗ್ಡೆ, ಶ್ರೀನಾಥ್ ಹೆಗ್ಡೆ, ಯುವ ಘಟಕದ ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶುಭರಾಜ್ ಹೆಗ್ಡೆ ಸ್ವಾಗತಿಸಿದರು. ಸುಂದರ ಹೆಗ್ಡೆ, ದಯಾನಂದ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

