ಹೇರಂಜಾಲು : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ

0
82

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ , ಸಮೃದ್ಧ ಬೈಂದೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ , ಜೋಗಿ ಮನೆ ಟ್ರಸ್ಟ್ ಹಳೆಗೇರಿ ಮೊರಾರ್ಜಿ ವಸತಿ ಶಾಲೆ ಇವರುಗಳ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ” ಪ್ರೇರಣಾ 2025″ ಕಾರ್ಯಕ್ರಮ ಮೊರಾರ್ಜಿ ವಸತಿ ಶಾಲೆ ಹೇರಂಜಾಲುವಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ಎಲ್ ಸಿ ನೋಡೆಲ್ ಅಧಿಕಾರಿ ಯೋಗೀಶ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಜೋಗಿ ಮನೆ ಟ್ರಸ್ಟ್ ನ ವಸಂತ ಜೋಗಿ, ಸೀನಿಯರ್ ಚೇಂಬರ್ನನ ರಾಷ್ಟ್ರೀಯ ನಿರ್ದೇಶಕೆ ಹುಸೇನ್ ಹೈಕಾಡಿ,ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲಯನ್ಸ್ ಸುಂದರ್ ಕೋಟಾರಿ, ರಹಿಮಾನ್,ಕರಾಮಾತುಲ್ಲ, ಮಂಜುನಾಥ್ ನಾಯಕ್ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಆಗಿ ಸರೋಜಾ ವಲಯ ತರಬೇತುದಾರರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವ ಹಿಸಿದರು .ಮುಖ್ಯ ಶಿಕ್ಷಕಿ ಕಮಲ ಸ್ವಾಗತಿಸಿ ವಂದಿಸಿದರು ಕಾರ್ಯಕ್ರಮ ದ ನಿರ್ದೇಶಕರು ಸುಮಾ ಆಚಾರ್ ಪ್ರಾಸವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here