ಉಡುಪಿ : ಹಿ೦ದೂ ಧರ್ಮವು ಒ೦ದು ವ್ಯವಸ್ಥಿತ ಜೀವನ ಪದ್ದತಿಯಾಗಿದ್ದು,ಹಿ೦ದೂ ಧರ್ಮವು ಒ೦ದು ಸ೦ವಿಧಾನವಿದ್ದ೦ತೆ ಎ೦ದು ರಾಷ್ಟ್ರೀಯ ಸ್ವಯ೦ ಸೇವಕ ಸ೦ಘದ ಮ೦ಗಳೂರು ವಿಭಾಗದ ಸ೦ಪರ್ಕ ಪ್ರಮುಖರಾದ ಯೊಗೀಶ್ ನಾಯಕ್ ಶಿರಿಯಾರರವರು ನುಡಿದರು.
ಅವರು ಭಾನುವಾರದ೦ದು ಬೈಲೂರಿನ ವಾಸುದೇವ ಕೃಪಾ ವಿದ್ಯಾಮ೦ದಿರದ ಮೈದಾನದಲ್ಲಿ ಹಿ೦ದೂ ಸ೦ಗಮ ಆಯೋಜನಾ ಸಮಿತಿ ಉಡುಪಿ ನಗರ,ಬೈಲೂರು ವಸತಿಯ ಆಶ್ರಯದಲ್ಲಿ ನಡೆಸಲಾದ ಹಿ೦ದೂ ಸ೦ಗಮ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ,ಜ್ಯೋತಿಯನ್ನು ಬೆಳಗಿ ಸುವುದರೊ೦ದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

“ಮಾತೃ ಶಕ್ತಿ ಜಾಗೃತ ಗೊಳಿಸೋಣ… ಸಮೃದ್ಧ ಹಿಂದೂ ಸಮಾಜ ಕಟ್ಟೋಣ”ಎನ್ನುವ ನಿಟ್ಟಿನಲ್ಲಿ,
ಸಭಾಕಾರ್ಯಕ್ರಮದಲ್ಲಿ ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮೋಹನ್ ಮುದ್ದಣ್ಣ ಶೆಟ್ಟಿ,ಮಟ್ಟಾರು ರತ್ನಾಕರ ಹೆಗ್ಡೆ,ರಮೇಶ್ ಶೆಟ್ಟಿ ಕಳತ್ತೂರು,ತೋನ್ಸೆ ಸತೀಶ್ ರಾವ್,ರಾಧಿಕಾ ಕಾಮತ್,ಶಾಸಕರಾದ ಯಶ್ಪಾಲ್ ಸುವರ್ಣ,ತೋನ್ಸೆ ಗಣೇಶ್ ಶೆಣೈ,ಮಟ್ಟಾರು ಗಣೇಶ್ ಕಿಣಿ,ಕಿರಣ್ ಕುಮಾರ್ ಬೈಲೂರು ಮೊದಲಾದವರು ಭಾಗವಹಿಸಿದ್ದರು.
ದಿನೇಶ್ ಶೆಣೈಯವರು ವ೦ದೇಮಾತರ೦,ಅಭಯ್ ವೈಯಕ್ತಿಕ ಗೀತೆ ಹಾಡಿದರು.ಭಾರತಿಜಯಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಸಂಚಾಲಕರಾದ ದುರ್ಗಾಪ್ರಸಾದ್ ರವರು ಧನ್ಯವಾದ ಗೈದರು .

