ನವದೆಹಲಿ : ಭಾರತದಲ್ಲಿ ಪ್ರೀಮಿಯಂ ಕಾರುಗಳನ್ನು ಉತ್ಪಾದಿಸುವ ಮುಂಚೂಣಿಯ ಉತ್ಪಾದಕ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್.ಸಿ.ಐ.ಎಲ್) ತನ್ನ ನ್ಯೂ ಸಿಟಿ ಸ್ಪೋರ್ಟ್ ಅನ್ನು ಇಂದು ಬಿಡುಗಡೆ ಮಾಡಿದ್ದು ತನ್ನ ಜನಪ್ರಿಯ ಮತ್ತು ಮಧ್ಯಮ ಗಾತ್ರದ ಸೆಡಾನ್ ಹೊಂಡಾ ಸಿಟಿಗೆ ದಿಟ್ಟ ಹೊಸ ರೂಪ ನೀಡಿದೆ. ವೈಯಕ್ತಿಕತೆ ಅಭಿರುಚಿಯ ಯುವ ಕೊಳ್ಳುಗರನ್ನು ಸೆಳೆಯಲು ವಿನ್ಯಾಸಗೊಳಿಸಲಾದ ಈ ಸಿಟಿ ಸ್ಪೋರ್ಟ್ ಕ್ರೀಡಾ ಮನೋಭಾವದ ಹೊರಾಂಗಣದ ಸ್ಟೈಲಿಂಗ್ ಅನ್ನು ಕಪ್ಪು ಅಕ್ಸೆಂಟ್ ಗಳೊಂದಿಗೆ ನೀಡುತ್ತಿದ್ದು ಪ್ರೀಮಿಯಂ ಎಲ್ಲ ಕಪ್ಪು ಒಳಾಂಗಣಗಳು ಕೆಂಪು ಹೊಲೈಟ್ಸ್ ಗೆ ವಿರುದ್ಧವಾಗಿವೆ ಮತ್ತು ಒಳಗಿನ ಲೈಟಿಂಗ್ ವಿಶೇಷವಾದ ಚಾಲನೆಯ ಅನುಭವ ನೀಡುತ್ತದೆ. ‘ಲೈಫ್ ಈಸ್ ಎ ಸ್ಪೋರ್ಟ್ ಎಂಬ ಘೋಷವಾಕ್ಯವನ್ನು ಬಿಂಬಿಸುವ ಹೊಸ ಸಿಟಿ ಸ್ಪೋರ್ಟ್ ರಸ್ತೆಯ ಮೇಲೆ ಮತ್ತು ಜೀವನದಲ್ಲಿ ಶಕ್ತಿ, ವಿಶ್ವಾಸ ಹಾಗೂ ಪ್ರತ್ಯೇಕವಾಗಿ ನಿಲ್ಲುವ ಆಸಕ್ತಿಯುಳ್ಳವರನ್ನು ಸಂಭ್ರಮಿಸುತ್ತದೆ. ಸಿಟಿ ಸ್ಪೋರ್ಟ್ ಸೀಮಿತ ಯೂನಿಟ್ ಗಳಲ್ಲಿ ಸಿಟಿ ಸರಣಿಯಲ್ಲಿ ಹೊಸ ಗ್ರೇಡ್ ಆಗಿ ಲಭ್ಯವಿದ್ದು ವಿಶೇಷ ಕೊಡುಗೆಯನ್ನು ವಿಶಿಷ್ಟ್ಯತೆಯನ್ನು ಕೋರುವವರಿಗೆ ರೂಪಿಸಲಾಗಿದೆ. ಇದನ್ನು ಸಿವಿಟಿ (ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್)ಯಾಗಿ ನೀಡಲಾಗುತ್ತಿದ್ದು ರೇಡಿಯೆಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಮೀಟಿಯೊರಾಯಿಡ್ ಮೆಟಾಲಿಕ್ ಮೂರು ಬಣ್ಣಗಳಲ್ಲಿ ನೀಡಲಾಗುತ್ತಿದೆ. ಹೊಸ ಬಿಡುಗಡೆ ಕುರಿತು ಹೊಂಡಾ ಕಾರ್ಸ್ ಇಂಡಿಯಾ ಲಿ.ಯ ಮಾರ್ಕೆಟಿಂಗ್ ಅಂಡ್ ಸೇಲ್ಸ್ ಉಪಾಧ್ಯಕ್ಷ ಶ್ರೀ ಕುನಾಲ್ ಬೆಕ್ಸ್, ‘ಹೊಸ ಸಿಟಿ ಸ್ಪೋರ್ಟ್ ಅನ್ನು ವೈಯಕ್ತಿಕತೆಗೆ ಮೌಲ್ಯ ನೀಡುವ ಸ್ಪೂರ್ತಿಯುತ ಚಾಲನೆಯ ಅನುಭವ ನಿರೀಕ್ಷಿಸುವ ಯುವ ಕೊಳ್ಳುಗರ ಆಕಾಂಕ್ಷೆಗಳನ್ನು ಪೂರೈಸಲು ರೂಪಿಸಲಾಗಿದೆ. ಇದು ಸ್ಪೋರ್ಟಿ ಹೊರಾಂಗಣ ಮತ್ತು ಒಳಾಂಗಣ ಸ್ಟೈಲ್ ನ ಪರಿಪೂರ್ಣ ಸಂಯೋಜನೆ ಹೊಂದಿದ್ದು ಫನ್ ಟು ಡ್ರೈವ್ ಪರ್ಫಾರ್ಮೆನ್ಸ್ ಮತ್ತು ಹೊಂಡಾ ಸಿಟಿ ಖ್ಯಾತಿ ಪಡೆದ ಪ್ರತಿನಿತ್ಯ ಬಳಸಬಲ್ಲತೆ ಹೊಂದಿದ್ದು ಮತ್ತಷ್ಟು ಆಕರ್ಷಕ ದರದಲ್ಲಿದೆ” ಎಂದರು.
ಹೊಂಡಾ ಸಿಟಿ ಸೋರ್ಟ್ ಪ್ರಮುಖಾಂಶಗಳು: ಚಲನಶೀಲ ಹೊರಾಂಗಣದ ಉಪಸ್ಥಿತಿ- ಸಿಟಿ ಸ್ಪೋರ್ಟ್ ತನ್ನ ಆಕರ್ಷಕ ಹೊರಾಂಗಣದಿಂದ ಎಲ್ಲರ ಗಮನ ಸೆಳೆಯುತ್ತದೆ. ಸ್ಪೋರ್ಟಿ ಬ್ಲಾಕ್ ಗ್ರಿಲ್ ತಕ್ಷಣವೇ ದಿಟ್ಟ ಟೋನ್ ನೀಡುತ್ತದೆ. ಅದಕ್ಕೆ ಪೂರಕವಾಗಿ ಸ್ಪೋರ್ಟಿ ಬ್ಲಾಕ್ ಟ್ರಂಕ್ ಲಿಪ್ ಸ್ಟಾಯರ್, ಗ್ಲಾಸಿ ಬ್ಲಾಕ್ ಶಾರ್ಕ್ ಫಿನ್ ಆಂಟೆನ್ನಾ ಮತ್ತು ವಿಶೇಷ ಸ್ಪೋರ್ಟ್ ಎಂಬೈಮ್ ಹೊಂದಿದೆ. ಸಿಲೌಟ್ ಮಲ್ಟಿ-ಸ್ಪೋಕ್ ಸ್ಪೋರ್ಟಿ ಗ್ರೇ ಅಲಾಯ್ ವೀಲ್ಸ್ ಮತ್ತು ಬ್ಲಾಕ್ ಡಿ.ಆರ್.ವಿ.ಎಂ.ಗಳಿಂದ (ಔಟ್ ಸೈಡ್ ರಿಯರ್-ವ್ಯೂ ಮಿರರ್ಸ್) ಉನ್ನತಗೊಳಿಸಲಾಗಿದೆ.
ಕ್ರೀಡಾ ಸ್ಫೂರ್ತಿಯ ಒಳಾಂಗಣದ ಕುಶಲತೆ : ಒಳಾಂಗಣವು ಇಮ್ಮರ್ಸಿವ್ ಸ್ಫೋರ್ಟಿ ಬ್ಲಾಕ್ ಕ್ಯಾಬಿನ್ ಗೆ ತೆರೆದುಕೊಳ್ಳುತ್ತದೆ ಅದು ಪ್ರೀಮಿಯಂ ಲೆದರ್ ಬ್ಲಾಕ್ ಸೀಟುಗಳು ಮತ್ತು ಪ್ಲಪ್ ಸಾಫ್ಟ್ ಡೋರ್ ಇನ್ಸರ್ಟ್ಸ್ ಅನ್ನು ವಿರುದ್ಧವಾದ ಕೆಂಪು ಹೊಲಿಗೆಯ ಮಾದರಿಗಳನ್ನು ಸೀಟುಗಳು, ಡೋರ್ ಇನ್ಸರ್ಟ್ ಗಳು ಮತ್ತು ಸ್ವೀರಿಂಗ್ ವೀಲ್ ಗಳಲ್ಲಿ ಹೊಂದಿದೆ. ಈ ಡಾರ್ಕ್ ಥೀಮ್ ಅನ್ನು ಬ್ಲಾಕ್ ರೂಫ್ ಲೈನಿಂಗ್ ಮತ್ತು ಪಿಲ್ಲರ್ ಗಳಿಂದ ವಿಸ್ತರಿಸಲಾಗಿದೆ. ಡೈನಮಿಸಂನ ಉಜ್ವಲ ಸ್ಪರ್ಶವು ಸ್ಪೋರ್ಟಿ ಡಾರ್ಕ್ ರೆಡ್ ಡ್ಯಾಶ್ ಗಾರ್ನಿಷ್ ಮತ್ತು ಗ್ಲಾಸ್ ಬ್ಲಾಕ್ ಎಸಿ ವೆಂಟ್ ಗಳಿಂದ ಸೇರ್ಪಡೆ ಮಾಡಿದ್ದು ಇದು ಅದರ ಕ್ರೀಡಾ ಗುಣ ಮತ್ತು ಸೂಕ್ಷ್ಮ ವಿವರಗಳನ್ನು ಎತ್ತರಿಸುತ್ತದೆ. ಕ್ಯಾಬಿನ್ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದು 7-ಕಲರ್ ರಿದಮಿಕ್ ಅಂಬಿಯೆಂಟ್ ಲೈಟ್ ಅದರ ಸ್ಪೋರ್ಟಿ ಕ್ಯಾಬಿನ್ ಮತ್ತು ಶಕ್ತಿಯುತ ಡ್ರೈವ್ ಗೆ ಹೊಂದುವಂತೆ ರೂಪಿಸಲಾಗಿದೆ.
ಶಕ್ತಿಯುತ ಚಾಲನೆ : ಹೊಂಡಾದ 1.5 ಲೀ ಐ-ವಿಟೆಕ್ ಪೆಟ್ರೋಲ್ ಎಂಜಿನ್ (ಇ20 ಕಾಂಪ್ಲಿಯೆಂಟ್)ನಿಂದ ಸನ್ನದ್ಧವಾದ ಸಿವಿಟಿ ಮತ್ತು ಪ್ಯಾಡಲ್ ಶಿಫ್ಟ್ ಹೊಂದಿದ್ದು 121 ಪಿ.ಎಸ್. ಪವರ್ ನೀಡುತ್ತದೆ, 145ಎನ್.ಎಂ.ಟಾರ್ಕ್ ಮತ್ತು 18.4 ಕಿ.ಮೀ/ಐ ಪ್ಯೂಯೆಲ್ ಮೈಲೇಜ್ ನೀಡುವ ಸಿಟಿ ಸ್ಪೋರ್ಟ್ ಮೃದುವಾದ ಆದರೆ ಸ್ಫೂರ್ತಿಯುತ ಕಾರ್ಯಕ್ಷಮತೆ ನೀಡುತ್ತಿದ್ದು ಅದು ದಕ್ಷತೆಯನ್ನು ಸಕ್ರಿಯ ಚಾಲನೆಯೊಂದಿಗೆ ಸಮತೋಲನಗೊಳಿಸುತ್ತದೆ. ಇದು ಹೊಂಡಾ ಸೆನ್ಸಿಂಗ್ (ಎಡಿಎಎಸ್) ನೊಂದಿಗೆ ಪ್ರತಿ ಸವಾಲನ್ನು ಎದುರಿಸುತ್ತಿದ್ದು ಇದು ಸ್ಮಾರ್ಟ್ ಮತ್ತು ಅಂತರ್ಬೋಧೆಯ ಸುಧಾರಿತ ಸುರಕ್ಷತೆ ನೀಡುತ್ತದೆ.
ಬೆಲೆ ರೂ.ಗಳಲ್ಲಿ: ಆಕರ್ಷಕ ಪ್ರಾರಂಭಿಕ ಬೆಲೆಯಲ್ಲಿ ನೀಡಲಾಗುತ್ತಿರುವ ಸಿಟಿ ಸ್ಪೋರ್ಟ್ ಪ್ರತಿ ಸಲವು ಪ್ರತ್ಯೇಕ ಸ್ಟೈಲ್ ಮತ್ತು ಕಾರ್ಯಕ್ಷಮತೆ ನೀಡುತ್ತದೆ.