ಸಂಗೀತ, ಸಾಂಸ್ಕೃತಿಕ, ಪರಿಸರ, ಭಾಷಾ ಸೇವೆಗೆ ಸಂದ ಗೌರವ : ನಾಲ್ವರು ಸಾಧಕರಿಗೆ ಪ್ರತಿಷ್ಠಿತ ಪುರಸ್ಕಾರ

0
17

ಡಾ. ಮಯ್ಯ ಸೇರಿ ನಾಲ್ವರಿಗೆ ಅಂತರಾಷ್ಟ್ರೀಯ ಸಂಸ್ಥೆಯ ಗೌರವ

ಪುದುಚೇರಿಯಲ್ಲಿ ಅದ್ದೂರಿ ಪ್ರಶಸ್ತಿ ಪ್ರದಾನ. ಕರಾವಳಿಯ ನಾಲ್ವರು ಸಾಧಕರಿಗೆ ರಾಷ್ಟ್ರೀಯ ಮಟ್ಟದ ಪುರಸ್ಕಾರದ ಸಂಭ್ರಮ

​ ತುಳುನಾಡು : ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆ ‘ಅಮೆರಿಕನ್ ವಿಸ್ಡಂ ಪೀಸ್ ಯುನಿವರ್ಸಿಟಿ’ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕರಾವಳಿಯ ನಾಲ್ವರು ಸಾಧಕರು ಭಾಜನರಾಗಿದ್ದಾರೆ. ಸಂಗೀತ, ಪರಿಸರ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಇವರ ಅನನ್ಯ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ :

​*ಡಾ. ಎನ್. ಸೋಮಶೇಖರ ಮಯ್ಯ (ಸಂಗೀತ): ಸಂಗೀತ ಲೋಕದ ಇವರ ಸ್ವರ ಮಾಧುರ್ಯಕ್ಕೆ ‘ಗಾನಗಂಧರ್ವ’ ಬಿರುದಿನೊಂದಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ.

​*ಡಾ. ಮಂದಾರ ರಾಜೇಶ್ ಭಟ್ (ಪರಿಸರ): ಪ್ರಕೃತಿ ಸಂರಕ್ಷಣೆಯ ದಣಿವರಿಯದ ಪ್ರತಿಪಾದನೆಗಾಗಿ ಇವರಿಗೆ ‘ಪರಿಸರ ಪ್ರತಿಪಾದಕ ಶ್ರೇಷ್ಠತಾ ಪ್ರಶಸ್ತಿ’ ಒಲಿದಿದೆ.

​*ವೇದಾವತಿ (ಭಾಷಾ ಸೇವೆ): ಸುಮಾರು 15 ವರ್ಷಗಳ ಕಾಲ ಹಿಂದಿ ಭಾಷಾ ಪ್ರಸಾರಕ್ಕಾಗಿ ಶ್ರಮಿಸಿದ ಇವರಿಗೆ ‘ಹಿಂದಿ ಭಾಷಾ ಪ್ರಚಾರ ಸೇವಾ ರತ್ನ’ ನೀಡಿ ಗೌರವಿಸಲಾಗುತ್ತಿದೆ.

​*ಕುಷಿ ವಿಟ್ಲ (ಯುವ ಪ್ರತಿಭೆ): ವಿದ್ಯಾರ್ಥಿ ದೆಸೆಯಲ್ಲೇ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆ ತೋರಿದ ಖುಷಿ ಅವರಿಗೆ ‘ನಾದ ನಕ್ಷತ್ರ’ ಪ್ರಶಸ್ತಿ ಘೋಷಿಸಲಾಗಿದೆ.

​ಸಮಾರಂಭದ ವಿವರ :

ತಮಿಳುನಾಡಿನ ಪುದುಚೇರಿಯಲ್ಲಿ ಇದೇ ತಿಂಗಳ 25 ರಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

LEAVE A REPLY

Please enter your comment!
Please enter your name here