ಕಟೀಲು : ಮಂಗಳೂರು ಎಂ ಅರ್ ಪಿ ಎಲ್ ನ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಅವರು ಇತ್ತೀಚಿಗೆ ಸುರತ್ಕಲ್ ಎನ್ ಐ ಟಿ ಕೆ ಸಂಸ್ಥೆಯಿಂದ ಪಿ. ಎಚ್. ಡಿ. ಪದವಿಗಳಿಸಿದ್ದು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪೂಜ್ಯ ಅಸ್ರಣ್ಣರು ದೇವರ ಪ್ರಸಾದ ಶೇಷವಸ್ತ್ರ ನೀಡಿ ಗೌರವಿಸಿದರು. ಸ್ಟೀವನ್ ಪಿಂಟೋ ರವರು ಕಟೀಲು ವಿದ್ಯಾಸಂಸ್ಥೆಯಲ್ಲಿ ತನ್ನ ವಿದ್ಯಾಭ್ಯಾಸ ಮಾಡಿರುತ್ತಾರೆ.