ಗೌರವ ಡಾಕ್ಟರೇಟ್ ಪದವಿ ಪಡೆದ ಚನ್ನಬಸವ ಕೊಟಗಿಯವರಿಗೆ ಸನ್ಮಾನ

0
72


ಜಯನಗರ ಸತ್ಯನಾರಪೇಟೆ ವಾಕಿಂಗ್ ಗ್ರೂಪಿನ ಹಲವಾರು ಸದಸ್ಯರು ಸೇರಿ ಆರೋಗ್ಯ, ಆಧ್ಯಾತ್ಮ, ಮತ್ತು ಧಾರ್ಮಿಕ ಉದ್ದೇಶದಿಂದ ಸ್ಥಾಪಿತವಾದ J SW ಗ್ರೂಪ್ ಸದಸ್ಯರು ಇಂದು ನಗರದ ಯುವ ಕಲಾವಿದ,ಸಾಹಿತಿ, ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರಾದ ಕೊಟಿಗಿ ಚನ್ನಬಸವ ಇವರಿಗೆ ಹರಿಯಾಣ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಇವರ ಸಾಧನೆಗೆ ಮೆಚ್ಚಿ ನಮ್ಮ ಜಯನಗರ ಸತ್ಯನಾರಾಯಣ ಪೇಟೆ ವಾಕಿಂಗ್ ನ ಎಲ್ಲ ಸದಸ್ಯರು ಸೇರಿ ಇಂದು ಖಾಸಗಿ ತೋಟವೊಂದರಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹೀಗೆ ಸುಮಾರು ವರ್ಷಗಳಿಂದ ವಿಶೇಷವಾಗಿ ಮಕ್ಕಳಿಗೆ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಆಧ್ಯಾತ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರೂ ಸಹ ಬಾಳ್ವೆ ನಡೆಸುತ್ತಿರುವ ನಮ್ಮ ವಾಕಿಂಗ್ ಗ್ರೂಪ್ ಇಂದು ಪ್ರತಿಭಾ ಪುರಸ್ಕಾರ ನೀಡಿ ಚನ್ನಬಸವ ಕೊಟಗಿಯವರಿಗೆ ಗೌರವಿಸಲಾಯಿತು ಎಂದು ಸಂಚಾಲಕರಾದ ಟಿ. ಆಂಜನೇಯ ರವರು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಎಂ ಸಿ ಹಿರೇಮಠ, ವೀರಣ್ಣ ಶೆಟ್ಟರ್, ಸಿದ್ದರಾಮಪ್ಪ ಗೌಡ , ರುದ್ರಗೌಡ ಪಾಟೀಲ್,ಡಾ.ವೀರನಗೌಡ ಪಾಟೀಲ್,ಮರಳು ಸಿದ್ಧಯ್ಯ, ಪರಗಿ ನಾಗರಾಜ, ವಿ. ಎಸ್. ಮಗದಾಳ,, ವಿರೇಶ್ ಪವಾಡಶೆಟ್ಟಿ, ಹೆಚ್.ಮಲ್ಲಪ್ಪ, ರಾಜಶೇಖರ್ ಕೊಟಗಿ, ರಾಮದೇವ್ ಮತ್ತು ನಿಂಗಪ್ಪ ಪಲ್ಲೆದ , ತಾರಾನಾಥ್ ಮಾಸ್ಟರ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here