ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಿತ್ಯಾನಂದ ಶೆಟ್ಟಿ ಹಾರಾಡಿ ಹಾಗೂ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಉಮೇಶ ಪೂಜಾರಿ ಚಾಂತಾರು ಇವರಿಗೆ ಅಜಪುರ ಕರ್ನಾಟಕ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ದೇವಸ್ಥಾನದ ಸಾನಿಧ್ಯದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಬಲರಾಮ್ ಕಲ್ಕೂರ್, ಕಾರ್ಯದರ್ಶಿ ದಿನಕರ ಶೆಟ್ಟಿ ಬೈಕಾಡಿ, ಅಶೋಕ್ ಭಟ್, ಶಂಕರನಾರಾಯಣ ಭಟ್, ಕೆ.ಕೃಷ್ಣ ಮೂರ್ತಿ, ಆರ್.ಟಿ.ಭಟ್, ನಾರಾಯಣ ಮಡಿ, ಭಾಸ್ಕರ ಶೆಟ್ಟಿ, ಗಿರೀಶ್ ಅಡಿಗ, ಮಾದವ ಖಾರ್ವಿ, ರಂಗ ದೇವಾಡಿಗ, ಸೂರ್ಯ ಸಾಲಿಯಾನ್, ಅಲ್ಪೋನ್ ಡಿಸಿಲ್ವ,ಗಾಯತ್ರಿ, ದಿನಮಣಿ ಶಾಸ್ತ್ರೀ, ಮತ್ತಿತರರು ಉಪಸ್ಥಿತರಿದ್ದರು.

