ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಹಾರ್ಲಿಕ್ಸ್ ಬಿಡುಗಡೆ

0
11

ಮಂಗಳೂರು : ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಸಂಸ್ಥೆಯು ತನ್ನ ಪ್ರಮುಖ ಪೌಷ್ಟಿಕಾಂಶ ಪಾನೀಯ ಬ್ರ್ಯಾಂಡ್ ಆದ ‘ಹಾರ್ಲಿಕ್ಸ್’ ಅನ್ನು ಮಂಗಳೂರಿನಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸೂಪರ್ ಫುಡ್ಸ್ ಹಾರ್ಲಿಕ್ಸ್ ಆವೃತ್ತಿಯನ್ನು ಮೊಳಕೆ ಬರಿಸಿದ ಬಾರ್ಲಿ, ಸಿರಿಧಾನ್ಯಗಳು, ಓಟ್ಸ್ ಮತ್ತು ಬಾದಾಮಿಗಳಂತಹ ಸೂಪರ್‌ ಫುಡ್‌ ಗಳ ಮಿಶ್ರಣದಿಂದ ತಯಾರಿಸಲಾಗಿದೆ.

ಮಂಗಳೂರು ಸೇರಿದಂತೆ ಎಲ್ಲಾ ಕಡೆ ಆಧುನಿಕ ಜೀವನಶೈಲಿಯಿಂದ ವ್ಯಕ್ತಿಗಳಿಗೆ ಅಗತ್ಯ ಪೌಷ್ಠಿಕಾಂಶ ದೊರೆಯುತ್ತಿಲ್ಲ, ಅದಕ್ಕೆ ಪೂರಕವಾಗಿ ಪೌಷ್ಠಿಕಾಂಶ ಒದಗಿಸುವ ನಿಟ್ಟಿನಲ್ಲಿ ಈ ಹೊಸ ಹಾರ್ಲಿಕ್ಸ್ ಸೂಪರ್ ಫುಡ್ಸ್ ಬಿಡುಗಡೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಹಿಂದೂಸ್ತಾನ್ ಯೂನಿಲಿವರ್‌ ನ ಫುಡ್ಸ್ ಅಂಡ್ ರಿಫ್ರೆಶ್‌ ಮೆಂಟ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ರಜನೀತ್ ಕೊಹ್ಲಿ ಅವರು, “ಮಂಗಳೂರಿನಲ್ಲಿ ಹಾರ್ಲಿಕ್ಸ್ ಸೂಪರ್‌ ಫುಡ್ಸ್ ಬಿಡುಗಡೆ ಮಾಡುವ ಮೂಲಕ, ನಾವು ಈ ಭಾಗದ ಗ್ರಾಹಕರಿಗೆ ಸೂಕ್ತವಾದ, ವಿಜ್ಞಾನ ಆಧಾರಿತ ಪೌಷ್ಟಿಕಾಂಶವನ್ನು ನೀಡಲು ಹಾರ್ಲಿಕ್ಸ್ ಅನ್ನು ಹೊಸ ರೂಪದಲ್ಲಿ ಪರಿಚಯಿಸಿದ್ದೇವೆ. ಸೂಪರ್‌ ಫುಡ್‌ ಗಳ ಗುಣಮಟ್ಟವನ್ನು ನಮ್ಮದೇ ಆದ ‘ನ್ಯೂಟ್ರಿಮ್ಯಾಕ್ಸ್’ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರು ಇಷ್ಟಪಡುವ ಹಳೆಯ ರುಚಿಯನ್ನು ಉಳಿಸಿಕೊಂಡೇ ಹೆಚ್ಚು ಪೋಷಕಾಂಶ ಒದಗಿಸುವಂತೆ ಸಿದ್ಧಪಡಿಸಿದ್ದೇವೆ” ಎಂದು ತಿಳಿಸಿದರು.

ದಕ್ಷಿಣ ಏಷ್ಯಾ ಯೂನಿಲಿವರ್‌ ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಡಾ. ಸುಜಾತಾ ಜಯರಾಮನ್ ಮಾತನಾಡಿ, “ಹೊಸ ಹಾರ್ಲಿಕ್ಸ್‌ ಹೆಚ್ಚಿನ ಪೌಷ್ಟಿಕಾಂಶದ ಪ್ರಯೋಜನವನ್ನು ನೀಡುವುದಲ್ಲದೆ, ರೋಗನಿರೋಧಕ ಶಕ್ತಿ, ಬೆಳವಣಿಗೆ ಮತ್ತು ಜ್ಞಾನಗ್ರಹಣದ ಬೆಳವಣಿಗೆ ಸೇರಿ ಒಟ್ಟಾರೆ ಆರೋಗ್ಯ ಪಾಲಿಸಲು ನೆರವಾಗಲಿದೆ,” ಎಂದು ಹೇಳಿದರು.

ಈ ಹೊಸ ಆವೃತ್ತಿಯ ವಿಶೇಷತೆಯೆಂದರೆ ಇದರಲ್ಲಿ ಬಳಸಲಾಗಿರುವ ಪೇಟೆಂಟ್ ಪಡೆದ ‘ನ್ಯೂಟ್ರಿಮ್ಯಾಕ್ಸ್’ ತಂತ್ರಜ್ಞಾನ. ಇದು ದೇಹಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಸತುವಿನಂತಹ ಖನಿಜಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುವ ‘ಫೈಟೇಟ್‌’ಗಳಂತಹ ವಿರೋಧಿ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಪದಾರ್ಥಗಳ ಸಂಸ್ಕರಣೆಯನ್ನು ಸುಧಾರಿಸುವ ಮೂಲಕ, ನ್ಯೂಟ್ರಿಮ್ಯಾಕ್ಸ್ ಕರಗುವ ಮತ್ತು ಕರಗದ ನಾರಿನಂಶವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಪೂರಕವಾಗುವುದಲ್ಲದೆ, ದೇಹವು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹೊಸ ಹಾರ್ಲಿಕ್ಸ್ ಈಗ ಅದೇ ಹಳೆಯ ಅದ್ಭುತ ರುಚಿಯೊಂದಿಗೆ ‘ಜೀರೋ ಆಡೆಡ್ ಶುಗರ್’ (ಸಕ್ಕರೆ ರಹಿತ) ಮಾದರಿಯಲ್ಲಿಯೂ ಲಭ್ಯವಿದೆ. ‘ಸ್ಮಾರ್ಟ್ ಸ್ವೀಟ್ನೆಸ್’ ತಂತ್ರಜ್ಞಾನದಿಂದ ತಯಾರಾಗಿರುವ ಇದು, ಯಾವುದೇ ಹೆಚ್ಚುವರಿ ಸಕ್ಕರೆ ಅಥವಾ ಕೃತಕ ಸಿಹಿಕಾರಕಗಳನ್ನು ಬಳಸದೆ, ಮೊಳಕೆ ಬರಿಸಿದ ಬಾರ್ಲಿಯಿಂದ ಬರುವ ನೈಸರ್ಗಿಕ ಸಿಹಿಯನ್ನು ಬಳಸಿ ಸಿದ್ಧಗೊಂಡಿದೆ.

ಹಾರ್ಲಿಕ್ಸ್ ಸೂಪರ್‌ ಫುಡ್ಸ್ ಈಗ ‘ಕ್ಲಾಸಿಕ್ ಮಾಲ್ಟ್’ ಸ್ವಾದದಲ್ಲಿ ರೀಟೇಲ್ ಮಳಿಗೆಗಳಲ್ಲಿ ಮತ್ತು ಆನ್‌ ಲೈನ್ ವೇದಿಕೆಗಳಲ್ಲಿ ಲಭ್ಯವಿದೆ. ಇದರ ಸಕ್ಕರೆ ರಹಿತ (ಜೀರೋ ಆಡೆಡ್ ಶುಗರ್) ಮಾದರಿಯು ಆಯ್ದ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here