ಮೂಡುಬಿದಿರೆಯಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಯೋಜನೆ, ತರಬೇತಿ, ಚರ್ಚಾ ಗೋಷ್ಠಿ

0
92

ಮಂಗಳೂರು ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಜನ್ಮಯ ರೈತ ಉತ್ಪಾದಕರ ಕಂಪನಿ, ಮೂಡುಬಿದರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಗಳ ಜಂಟಿ ಸಹಭಾಗಿತ್ವದಲ್ಲಿ ತೋಟಗಾರಿಕೆ ಪಿತಾಮಹ ದಿ.ಡಾ. ಎಂ ಎಚ್ ಮರಿಗೌಡ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಬೆಳೆಗಳಲ್ಲಿ ಸಂಸ್ಕರಣೆ, ಯೋಜನೆ, ತರಬೇತಿ ಹಾಗೂ ಚರ್ಚಾ ಗೋಷ್ಠಿ ಆಗಸ್ಟ್ 8ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲ್ಪ ವೃಕ್ಷ ಕ್ಕೆ ನೀರು ಎರೆದು  ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಕೃಷಿಕರಿಗೆ ನಮ್ಮ ಸೊಸೈಟಿ ಉತ್ತೇಜನವನ್ನು ನೀಡುತ್ತಿದೆ ಆ ಎಲ್ಲಾ ಸೌಲಭ್ಯಗಳನ್ನು ಕೃಷಿಕರು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು.

 ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ ಅವರು ತೋಟಗಾರಿಮೋವಾಬಕೆ ಬೆಳೆಗಳ ಸಂಸ್ಕರಣೆ, ಯೋಜನೆ ಗಳ ಬಗ್ಗೆ ತರಬೇತಿಯನ್ನು ನೀಡಿದರು. ಆರಂಭದಲ್ಲಿ ಕೃಷಿ  ವಿಚಾರ ವಿನಿಮಯ ಕೇಂದ್ರದ ಹಿರಿಯ ಸದಸ್ಯರಾದ ರಾಜವಮ೯ ಬೈಲಂಗಡಿಯವರು ಪ್ರಸ್ಥಾವಿಕ ವಾಗಿ ಮಾತನಾಡಿದರು . 

ವೇದಿಕೆಯಲ್ಲಿ  ಎಂಸಿಎಸ್ ಬ್ಯಾಂಕಿನ ಕಾಯ೯ನಿವಾ ಕರಾದ  ರಘುವೀರ್  ಕಾಮತ್ , ಕೃಷಿ ವಿಚಾರ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತಜನ್ಯ ಸಂಸ್ಥೆಯ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್, ಹಾಜರಿದ್ದರು.

 ಹಿರಿಯ ಸಹಾಯಕ ತೋಟಗಾರಿಕಾನಿರ್ದೇಶಕ ಪ್ರವೀಣ್ ಕೆ. ಅವರು  ಸ್ವಾಗತಿಸಿ ವಂದಿಸಿದರು. ಸದಾನಂದ  ನಾರಾವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here