ವರದಿ ರಾಯಿ ರಾಜ ಕುಮಾರ
ಹೊಸ್ಮಾರು-ನೆಲ್ಲಿಕಾರು ಸಮೀಪ ದನಗಳನ್ನು ಅಕ್ರಮವಾಗಿ ಕಡಿಯುವ ಉದ್ದೇಶದಿಂದ ಸಾಗಿಸುತ್ತಿದ್ದ ಮೂರನ್ನು ವಾಹನ ಸಮೇತ ಸ್ಥಳೀಯರು ಹಿಡಿದಿದ್ದಾರೆ. ಬಂಧಿತ ಆರೋಪಿಗಳಾದ ಮನ್ಸೂರ್ ಅದ್ಯಪಾಡಿ, ಮೊಹಮ್ಮದ್ ಅಶ್ಪತ್, ಅಬ್ದುಲ್ ಮೊಹಮ್ಮದ್ ನಿಜಾಂ ಇವರನ್ನು ಕಾನೂನು ಉಲ್ಲಂಘಿಸಿದ ಅಪರಾಧದಲ್ಲಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಪೊಲೀಸರು ವಿವಿಧ ಅಪರಾಧ ಸಂಖ್ಯೆಗಳ ಆಧಾರದಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ತಿಳಿದುಬಂದಿದೆ. ಹಲವಾರು ಅಪರಾಧಗಳಲ್ಲಿ ಇವರು ಶಾಮೀಲಾಗಿರುತ್ತಾರೆ ಎಂದು ತಿಳಿದುಬಂದಿದೆ.

