ಮನೆಗಳು ಕುಸಿತ: ಸೂಕ್ತ ಪರಿಹಾರ ಒದಗಿಸಲು ಐವನ್‌ ಡಿʼಸೋಜ ಆಗ್ರಹ

0
57

ಮಂಗಳೂರು: ಮಂಗಳೂರಿನ ಪಾಂಡೇಶ್ವರ ನ್ಯೂರೋಡ್ ನಲ್ಲಿ ಸುಮಾರು ನಾಲ್ಕು ಮನೆಗಳು ಕುಸಿದಿದ್ದು, ಭಾಗಶಃ ಹಾನಿಯಾಗಿದೆ. ಹಾಗೂ ಅನೇಕ ಮನೆಗಳಿಗೆ ನೀರು ನುಗ್ಗಿ ಮನೆಯ ಅಪಾರ ಸ್ವತ್ತುಗಳು ಹಾನಿಗೊಂಡಿದೆ. ಕುಸಿತಗೊಂಡ ಎಲ್ಲಾ ಮನೆಗಳಿಗೆ ಸರಿಯಾದ ಪರಿಹಾರ ಒದಗಿಸಿಕೊಡಬೇಕೆಂದು ಅಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ.

ಗ್ರಾಮಲೆಕ್ಕಾಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿʼಸೋಜಾ ಅವರು, ನಾಶಗೊಂಡ ಮನೆಯ ಬಗ್ಗೆ ಕೂಡಲೇ ಅಂದಾಜುಪಟ್ಟಿಯನ್ನು ತಯಾರಿಸಿ ನೀಡಬೇಕೆಂದು ನಗರ ಪಾಲಿಕೆಯ ಇಂಜಿನಿಯರ್ ಅವರಿಗೆ ಸೂಚಿಸಿದರು.
ಸುಮಾರು ಕಡೆಗಳಲ್ಲಿ ತೀವ್ರವಾಗಿ ಸುರಿದಂತಹ ಮಳೆಯಿಂದ ಸುಮಾರು 60 ಮನೆಗಳಿಗೆ ನೀರು ನುಗ್ಗಿದ್ದು, ಮತ್ತು ಅನೇಕ ಕಡೆಗಳಲ್ಲಿ ಮನೆ ಕುಸಿತಗೊಂಡಿದ್ದು ಗುಡ್ಡಕುಸಿತಗೊಂಡಿದ್ದು, ಈ ಪ್ರದೇಶಗಳಲ್ಲಿ ಉಂಟಾದ ನಷ್ಟವನ್ನು ಭರಿಸಲು ಕೂಡಲೇ ಅಂದಾಜು ಪಟ್ಟಿಯನ್ನು ತಯಾರಿಸಿ, ಸರಕಾರದ ಗಮನಕ್ಕೆ ತರಬೇಕೆಂದು ಮತ್ತು ಹೆಚ್ಚುವರಿ ಪರಿಹಾರದ ಅಗತ್ಯತೆ ಇದೆ. ಸರಕಾರ ಕೂಡಲೇ ಇದಕ್ಕೆ ಪರಿಹಾರ ಒದಗಿಸಲು ರಾಜ್ಯ ಸರಕಾರವನ್ನು ಒತ್ತಾಯಿಸುವುದಾಗಿ ಐವನ್ ಡಿʼಸೋಜಾ ತಿಳಿಸಿದ್ದಾರೆ. ಈ ವಿಚಾರದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಯಾವುದೇ ಪ್ರಾಣಹಾನಿ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಂ.ಸಿ.ಸಿ. ಜೂನಿಯರ್ ಇಂಜಿನಿಯರ್ ರೂಪ, ಬಾಸ್ಕರ್ ರಾವ್, ಸಂಜೀವ ಕೋಟ್ಯಾನ್ ಪಾಂಡೇಶ್ವರ, ಗಣೇಶ್ ಪಾಂಡೇಶ್ವರ, ಮಹೇಶ್. ಪ್ರೇಮ್ ಬಳ್ಳಲ್ಬಾಗ್ ಜೊತೆಗಿದ್ದರು.

LEAVE A REPLY

Please enter your comment!
Please enter your name here