ತೋಡಾರು; ನಗ-ನಗದು ಪಡೆದು ವಂಚನೆ, ಮನನೊಂದು ಗೃಹಿಣಿ ಆತ್ಮಹತ್ಯೆ

0
42

ಮೂಡುಬಿದಿರೆ: ಗೃಹಿಣಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತೋಡಾರು ಗ್ರಾಮದ ‌ AIR INDIA ಅಪಾರ್ಟ್‌ ಮೆಂಟ್‌ ನಲ್ಲಿ ನಡೆದಿದೆ.

ಅಪಾರ್ಟ್ ಮೆಂಟ್ ನಲ್ಲಿರುವ ಫಾಟ್ ನಂಬ್ರ 402 ನಿವಾಸಿ ನವಾಝ್ ಅವರ ಪತ್ನಿ ಶಫ್ರೀನಾ ಬಾನು (31 ) ಆತ್ಮಹತ್ಯೆ ಮಾಡಿಕೊಂಡವರು. ಇವರು ಪರಿಚಯಸ್ಥ ಆಟೋ ಚಾಲಕ ಪುತ್ತಿಗೆ ನಿವಾಸಿ ಅಶ್ರಫ್ ಎಂಬಾತನಿಗೆ ಕಳೆದ 7 ತಿಂಗಳ ಹಿಂದೆ ರೂ 2 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ನೀಡಿದ್ದರು ಎನ್ನಲಾಗಿದೆ. ಸಫೀನಾ ಬಾನು ಆತನಲ್ಲಿ ಹಲವಾರು ಬಾರಿ ಕೇಳಿದರೂ ಆತನು ‘ಇವತ್ತು ಕೊಡುತ್ತೇನೆ-ನಾಳೆ ಕೊಡುತ್ತೇನೆ’ ಎಂದು ಹೇಳುತ್ತಾ ದಿನ ಮುಂದೂಡುತ್ತಿದ್ದ.

ಆ. ೨೬ರಂದು ಖಂಡಿತವಾಗಿಯೂ ಕೊಡುತ್ತೇನೆ ಎಂದು ಹೇಳಿದ್ದವನು ಬೆಳಿಗ್ಗೆ 06.00 ಗಂಟೆಗೆ ಶಫೀನಾ ಬಾನು ರವರ ಫೋನ್ ಗೆ ಕರೆ ಮಾಡಿ “ಒಂದೋ ನೀನು ನನಗೆ ಇನ್ನೂ ಕಾಲಾವಕಾಶಬೇಕು ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು ಒಡವೆಗೆ ಏನು ಪೂಫ್ ಇದೆ” ಎಂದು ಉಡಾಫೆಯಾಗಿ ಮಾತನಾಡಿದ್ದ . ಇದರಿಂದ ಮನನೊಂದ ಸಫೀನಾ ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತ ಶಫೀನಾ ಬಾನು ರವರ ಪತಿ ನವಾಝ್ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸ್‌ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರು ಪ್ರಕರಣದ ತನಿಖೆಯನ್ನು ಮುಂದುವರಿಸಿರುತ್ತಾರೆ.

LEAVE A REPLY

Please enter your comment!
Please enter your name here