ಬಿಲ್ಲವ ಸೇವಾ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ನಾರಾಯಣ ಗುರು ಅವರ 171ನೇ ಜನ್ಮದಿನೊತ್ಸವವನ್ನು ದಿನಾಂಕ 7-9-2025 ಆದಿತ್ಯವಾರ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗಣಹೋಮ, ಭಜನೆ, ಹಾಗೂ ಶ್ರೀನಾರಾಯಣ ಗುರು ಪೂಜೆ ಯನ್ನು ನಡೆಸಲಾಯಿತು. ಕಾರ್ಯಕ್ರಮದ ಅಂಗವಾಗಿ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಅಂಕ ಗಳಿಸಿ ಉತ್ತೀರ್ಣರಾದ ಸಮಾಜದ ಮಕ್ಕಳಾದ ಅಶ್ವಿನಿ, ವಿದ್ಯಾರ್ಜಿತ್ ಕೆ, ಶ್ರೀಯಾ ಧನರಾಜ್, ಜಿತೇಶ್, ಸಮೀಕ್ಷಾ, ಸಾಯಿಕೃಷ್ಣ ಇವರನ್ನು ಅಭಿನಂದಿಸುವಂತಹ ಕಾರ್ಯಕ್ರಮವನ್ನು ಹಾಗೂ ಕೃಷಿ ಕ್ಷೇತ್ರದಲ್ಲಿ ಯುವ ಕೃಷಿಕ ಬಿರುದನ್ನು ಪಡೆದ ರಂಜಿತ್ ಬೀರಂತ ಬೈಲು, ನೂತನ ವೈದ್ಯ ರೀತಿ ಆದ ಅಕ್ಯುಪಂಚರ್ ನಲ್ಲಿ ಪ್ರಾವಿಣ್ಯತೆ ಪಡೆದ ನಾಗೇಶ್ ಪೂಜಾರಿ ಇವರ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಘು ಮೀಪುಗುರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಧ್ಯಾಪಕರಾದ ಧನರಾಜ್ ಅವರು ಹಾಗೂ ಮಂಜೇಶ್ವರದ ಜಾಯಿಂಟ್ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಸುಲೋಚನಾ ಕುಂಜತ್ತೂರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಗೌರವಧ್ಯಕ್ಷರಾದ ಕೇಶವ ಕೊಲ್ಕೆಬೈಲ್ ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಸ್ವಾಗತಿಸಿ ಸಂಘದ ಜತೆ ಕಾರ್ಯದರ್ಶಿ ಹರೀಶ್ ಕೆ ಆರ್ ಧನ್ಯವಾದಗೈದರು, ಪ್ರೆಮಜಿತ್ ಇವರು ನಿರೂಪಿಸಿದರು. ಕೋಶಧಿಕಾರಿ ಶಮ್ಮಿ ಕುಮಾರ್, ಸುಕಿರ್ತಿ, ಸತೀಶ್ ಗುಡ್ಡೆಮನೆ, ಸಂತೋಷ್, ಕಮಲಾಕ್ಷ ಸೂರ್ಲು ಅಶೋಕ್ ಬೀರಂತಬೈಲ್,ಚಂದ್ರಕಲಾ, ರೋಹಿಣಿ, ರವಿ ಪೂಜಾರಿ, ಮಹೇಶ್ ಇನ್ನಿತರರು ಸಹಕರಿಸಿದರು.