ಕಾಸರಗೋಡು: ಕಾಸರಗೋಡು ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಸಪ್ತತಿ ಮಹೋತ್ಸವವನ್ನು ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ವೀರ ಹನುಮಾನ್ ಮಂದಿರ ಕರಂದಕ್ಕಾಡ್ ಇದರ ಪ್ರಾದೇಶಿಕ ಸಮಿತಿ ಕರಂದಕ್ಕಾಡ್ ಭಾಗದಲ್ಲಿ ವಿದ್ಯುತ್ ದೀಪ ಅಲಂಕಾರ ಮತ್ತು ವಿಸರ್ಜನಾ ಮೆರವಣಿಗೆಯಲ್ಲಿ ಸ್ಥಬ್ದ ಚಿತ್ರ ವನ್ನು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ವಿಜ್ಞಾಪನಾ ಪತ್ರವನ್ನು ವೀರ ಹನುಮಾನ್ ಮಂದಿರದಲ್ಲಿ ಬಿಡುಗಡೆ ಗೊಳಿಸಲಾಯಿತು.