ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡ್ ಜಂಕ್ಷನ್ ಬಳಿ ಕಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಕಾರಿನ ಚಾಲಕಿ ಮಹಿಳೆ ಡಾ. ಶೃತಿ ಪವಾಡ ಸದೃಶ ಪಾರಾಗಿದ್ದಾರೆ. ಡಾ. ಶೃತಿ ಯವರು ಮುಕ್ಕ ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿ ಮಣಿಪಾಲ ಕಡೆಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಕೋಲ್ನಾಡ್ ಜಂಕ್ಷನ್ ಬಳಿ ಬೈಕಂಪಾಡಿಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರಿನ ಒಂದು ಪಾಶ್ವ ಸಂಪೂರ್ಣ ಹಾನಿಯಾಗಿದ್ದು ಕಾರು ತಿರುಗಿ ನಿಂತಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿ ಜಂಕ್ಷನ್ ಬಳಿ ಅಲ್ಲಲ್ಲಿ ಅಪಘಾತ ತಡೆಗೆ ಬ್ಯಾರಿಕೇಡ್ ಗಳನ್ನು ಇರಿಸಲಾಗಿದ್ದು ಕೆಲ ಸಣ್ಣಪುಟ್ಟ ವಾಹನ ಚಾಲಕರು ಅತಿ ವೇಗದಿಂದ ಚಲಿಸಿ ಬ್ಯಾರಿಕೇಡ್ ಬಳಿ ಎಡ ಬದಿಯಿಂದ ನುಗ್ಗಿಸಿ ಅನೇಕ ಅಪಘಾತಗಳು ಸಂಭವಿಸಿದ್ದು , ಹೆದ್ದಾಗಿಯಲ್ಲಿ ನಿಧಾನವಾಗಿ ಸಲ್ಲಿಸಿ ಜಾಗೃತರಾಗಿರಿ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಚಿತ್ರಾಪು ತಿಳಿಸಿದ್ದಾರೆ.

