ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಗೆ ಕೋಲಾರದಲ್ಲಿ ಗೌರವ ಅರ್ಪಣೆ, ಸನ್ಮಾನ

0
22

ಕೋಲಾರದ ಪ್ರತ್ರಿಕಾಭವನದಲ್ಲಿ ದಿನಾಂಕ 19.7.2025 ರಂದು, ಬಾಗಲಕೋಟ ಮೇಘಮೈತ್ರಿ ಸಾಹಿತ್ಯ ಸಂಘ ಕಮತಗಿ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕಾಸರಗೋಡು, ಹಾಗೂ ಕನ್ನಡ ಭವನ ಕೋಲಾರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ “ಗಡಿನಾಡು ಸಾಹಿತ್ಯ ಸಮ್ಮೇಳನ 2025.ನಡೆಯಿತು. ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಉದ್ಘಾಟಿಸಿದರು. ಇಂಚರ ನಾರಾಯಣ ಸ್ವಾಮಿ ಸರ್ವಾಧ್ಯಕ್ಷರಾಗಿದ್ದರು. ಧ್ವಜಾರೋ ಹಣೆ, ಅ. ನ. ಕೃ, ಡಾ. ರಾಜಕುಮಾರ್ ಪುತ್ತಲಿಗಳಿಗೆ ಹಾರಾರ್ಪಣೆ, ಮೆರವಣಿಗೆ, ಪುಸ್ತಕ ಮಳಿಗೆ ವಿವಿಧ ಗಣ್ಯ ವ್ಯಕ್ತಿಗಳು ಉದ್ಘಾಟಿಸಿದರು. ಕನ್ನಡ ಪ್ರೀತಿ ಕೇವಲ ಬಾಯಿಯಿಂದಲ್ಲ, ಹೃದಯದಿಂದ ಮೂಡಿ ಬರಬೇಕು., ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಎಂದು ಡಾ. ಸೋಮಶೇಖರ್ ಎಚ್ಚರಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ತನ್ನ ಮನೆಯನ್ನೇ ಕನ್ನಡ ಭವನವಾಗಿ, ಗ್ರಂಥಾಲಯ ವಾಗಿಸಿ ತನ್ನ ಜೇವನವನ್ನೇ ಕನ್ನಡ ಕ್ಕಾಗಿ ಮುಡುಪಾಗಿಟ್ಟದಂಪತಿಗಳು ಜತೆಯಾಗಿ ದುಡಿಯುತ್ತಿರುವುದು ಇಡೀ ಕರ್ನಾಟಕ ದಲ್ಲೇ ಅಪರೂಪ ಇವರು ಈಗ ಒಳನಾಡಿನಲ್ಲಿಯೂ ಕನ್ನಡದ ಉಳಿವಿಗಾಗಿ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿರುವುದು ಅನುಕರಣೀಯ ಎಂದು ಉದ್ಘಾಟನ ಭಾಷಣದಲ್ಲಿ ಹೇಳಿದರು.
ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ದಂಪತಿಗಳಿಗೆ ಸಮ್ಮೇಳನದಲ್ಲಿ ಗೌರವ ಸನ್ಮಾನ ಸಮ್ಮೇಳನದಲ್ಲಿ ನೀಡಲಾಯಿತು. ಅಧ್ಯಕ್ಷರಾದ ಇಂಚರ ನಾರಾಯಣ ಸ್ವಾಮಿ, ರಮೇಶ್ ಕಮತಗಿ, ಸ್ವರ್ಣ ಭೂಮಿ ಅಧ್ಯಕ್ಷ ಬಿ. ಶಿವಕುಮಾರ್ ಕಾರ್ಯಕ್ರಮ ಕ್ಕೆ ನೆತ್ರಿತ್ವ ನೀಡಿದರು. ಅನೇಕ ಗಣ್ಯರು bagavahisiddaru

LEAVE A REPLY

Please enter your comment!
Please enter your name here