ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಂದು, ಆ ಕೃತ್ಯವನ್ನು ಹಾವು ಕಡಿದ ರೀತಿಯಲ್ಲಿ ಬಿಂಬಿಸಿದ ಘಟನೆ ಇತ್ತೀಚಿಗೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಆದರೆ, ಪೋಲಿಸರ ತನಿಖೆ ಬಳಿಕ ಮರಣೋತ್ತರ ಪರೀಕ್ಷೆಯ ವರದಿಯೂ ಭಯಾನಕ ಸತ್ಯವನ್ನು ಬಹಿರಂಗಪಡಿಸಿದೆ. ಮೃತ ಅಮಿತ್ ಎಂದು ಗುರುತಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ಅಮಿತ್ ಮೊದಲಿಗೆ ಹಾವಿನ ಕಡಿತದಿಂದ ಸಾವನ್ನಪ್ಪಿಲ್ಲ. ಬದಲಾಗಿ, ಅವನ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್, ಅಮಿತ್ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಪೊಲೀಸರ ದಾರಿ ತಪ್ಪಿಸಲು ಹಾಗೂ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲು ಅಮಿತ್ ಹಾಸಿಗೆಯ ಕೆಳಗೆ ಜೀವಂತವಾದ ವಿಷಕಾರಿ ಹಾವನ್ನು ಇರಿಸಿದ್ದಾರೆ.
ಬೆಳಗ್ಗೆ ಅಮಿತ್ ಮೃತದೇಹ ಹಾಸಿಗೆಯ ಮೇಲೆ ಬಿದ್ದಿದ್ದು, ಹಾಸಿಗೆಯ ಕೇಳಗೆ ಜೀವಂತ ಹಾವೊಂದು ಪತ್ತೆಯಾಗಿದೆ. ಅವನ ದೇಹದ ಮೇಲೆ ಸುಮಾರು ಹತ್ತು ಬಾರಿ ಹಾವು ಕಡಿದ ಗುರುತುಗಳು ಪತ್ತೆಯಾಗಿದೆ. ಕುಟುಂಬಸ್ಥರು ಹಾವು ಕಡಿತದಿಂದಲೇ ಅಮಿತ್ ಸಾವನ್ನಪ್ಪಿದ್ದಾನೆ ಎಂದು ನಂಬಿದ್ದರು. ಹಾವಾಡಿಗನನ್ನು ಕರೆಸಿ, ಹಾವನ್ನು ಸೆರೆಹಿಡಿದು, ನಂತರ ಕಾಡಿಗೆ ಬಿಡಲಾಗಿದೆ.
ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದಾಗ, ಅಮಿತ್ ಹಾವು ಕಡಿತದಿಂದಲ್ಲ, ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇದು ಪೊಲೀಸರಿಗೆ ಅನುಮಾನ ಹುಟ್ಟಿಸಿ ಪರಿಶೀಲನೆ ಪ್ರಾರಂಭಿಸಿದರು. ಅದೇ ದಿನ ರಾತ್ರಿ, ಅಮಿತ್ ಪತ್ನಿ ಮತ್ತು ಆಕೆಯ ಪ್ರಿಯಕರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ಅಮಿತ್ನ್ನು ಕತ್ತು ಹಿಸುಕಿ ಕೊಂದ ದಿನ ರಾತ್ರಿ ಹಾವನ್ನು ಅವನ ದೇಹದ ಕೆಳಗೆ ಇಟ್ಟಿದ್ದರು. ಒತ್ತಡಕ್ಕೆ ಒಳಗಾದ ಹಾವು ಅಮಿತ್ನ್ನು ಹತ್ತು ಬಾರಿ ಕಚ್ಚಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.