ಹೈದರಾಬಾದ್ : ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ ಹಚ್ಚಿದ್ದಲ್ಲದೇ, ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಕ್ರೂರ ಘಟನೆ ಹೈದರಾಬಾದ್ ನಲ್ಲಕುಂಟಾ ಪ್ರದೇಶದಲ್ಲಿ ನಡೆದಿದೆ.
ವೆಂಕಟೇಶ್ ಕೃತ್ಯ ಎಸಗಿದ ಪಾಪಿ. ಪತ್ನಿ ತ್ರಿವೇಣಿ ಮೇಲೆ ಅಕ್ರಮ ಸಂಬಂಧದ ಬಗ್ಗೆ ಶಂಕೆ ಹೊಂದಿದ್ದುದೇ ಈ ದುಷ್ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿದ್ದ ವೆಂಕಟೇಶ್, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಾಯಿಯನ್ನು ಉಳಿಸಲು ಮಗಳು ಮುಂದಾದಾಗ ಆಕೆಯನ್ನೂ ಬೆಂಕಿಕಿಗೆ ತಳ್ಳಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ.
ಕಿರುಚಾಟ ಕೇಳಿ ನೆರೆ ಹೊರೆಯವರು ಓಡಿ ಬಂದಿದ್ದು , ತೀವ್ರ ಗಾಯಗಳಿಂದ ತ್ರಿವೇಣಿ ಅದಾಗಲೇ ಉಸಿರು ಚೆಲ್ಲಿದ್ದಳು. ಗಾಯಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

