ಪೋಷಕರು ಓದು ಎಂದು ಹೇಳಿದ್ದ ತಪ್ಪಾಯಿತು.. 14 ವರ್ಷದ ಬಾಲಕ ಆತ್ಮಹತ್ಯೆ

0
11
Suicide. Torn pieces of paper with the words Suicide. Black and White. Close up.

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹದಿಹರಿಯದ ಮಕ್ಕಳ ಆತ್ಮಹತ್ಯೆ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಚಿಕ್ಕ ಚಿಕ್ಕ ವಿಷಯಕ್ಕೆ ಮನನೊಂದು ತಮ್ಮ ಪ್ರಾಣವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಂತಹದೇ ಘಟನೆ ನಡೆದಿದೆ. ಪೋಷಕರು ಮನೆಯಲ್ಲೇ ಇದ್ದು ಓದು.. ಎಲ್ಲಿಗೂ ಹೋಗಬೇಡ ಎಂದು ಹೇಳಿದೆ ತಪ್ಪಾಯಿತು. ಬಾಲಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು.. ಶಿವಮೊಗ್ಗ ಜಿಲ್ಲೆಯ ತುಂಬೆ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನಿಖಿಲ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ. ನಿಖಿಲ್ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೊರಗಡೆ ಹೋಗುತ್ತೇನೆ ಎಂದು ಪೋಷಕರಲ್ಲಿ ಹೇಳಿದ್ದನು. ಆದರೆ ಪೋಷಕರು ಮನೆಯಲ್ಲೇ ಇದ್ದು ಒದಿಕೊಳ್ಳುವಂತೆ ತಿಳಿಸಿದ್ದರು.

ಇದರಿಂದ ಬಾಲಕ ನಿಖಿಲ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here