ಈ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಉಡುಪಿ ಶಾಖೆ, ಮತ್ತು ಎಂಜಿಎಂ ಕಾಲೇಜಿನ ಸಹಯೋಗದಲ್ಲಿ 2026ರ ಕೇಂದ್ರ ಬಜೆಟ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ವಕ್ತಾರ ಸಿ.ಎ. ಗಣೇಶ್ ವೈ ಅವರು 2026ರ ಕೇಂದ್ರ ಬಜೆಟ್ ಸಂಬಂಧಿತ ಅಂಶಗಳು, ತೆರಿಗೆ ಮತ್ತು ಆರ್ಥಿಕ ಪರಿಣಾಮಗಳ ಕುರಿತು ವಿವರಿಸಿದರು. ಈ ಬಜೆಟ್ ಅಭಿವೃದ್ಧಿ, ಉದ್ಯಮ, ಮೂಲಸೌಕರ್ಯ ಮತ್ತು ಮಧ್ಯಮ ವರ್ಗದ ರಿಯಾಯಿತಿಗಳ ಮೇಲೆ ಕೇಂದ್ರೀಕೃತವಾಗಿದೆ.
ಈ ಸಂದರ್ಭದಲ್ಲಿ ICAI ಉಡುಪಿ ಶಾಖೆಯ ಅಧ್ಯಕ್ಷರು ಸಿ.ಎ. ರಾಘವೇಂದ್ರ ಮೊಗೇರಾಯ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಚಾರ್ಯ ಡಾ. ಎಂ. ವಿಶ್ವನಾಥ ಪೈ, ಎಂಜಿಎಂ ಕಾಲೇಜಿನ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಿ.ಎ. ಕೆ. ಲಕ್ಷ್ಮೀಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಪೂರ್ವ ಅಧ್ಯಕ್ಷೆ: ಸಿ.ಎ. ಅರ್ಚನಾ ಆರ್. ಮಯ್ಯ SICASA ಅಧ್ಯಕ್ಷೆ: ಸಿ.ಎ. ಮಾಧುರಿ ಪ್ರಭು ಈ ಯುನಿಯನ್ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮದಲ್ಲಿ 140ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

