ಮಕ್ಕಳು ಉತ್ತಮ ಫಲಿತಾಂಶ ಪಡೆದರೆ ಮುಂದಿನ ಸಾಧನೆಗಳಿಗೆ ನಾಂದಿ- ಜಿ.ಎಸ್. ಬಡಿಗೇರ

0
9

ದಾವಣಗೆರೆ-: ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸ್.ಎಸ್.ಎಲ್.ಸಿ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದರೆ ಮುಂದಿನ ಸಾಧನೆಗಳಿಗೆ ನಾಂದಿಯಾಗುತ್ತದೆ. ಮಕ್ಕಳು ಕರ್ತವ್ಯ ನಿಷ್ಠೆಯಿಂದ, ಸಮಯಪ್ರಜ್ಞೆ ಜೊತೆಗೆ ಮಾನಸಿಕವಾಗಿ ಅಂತರಾಳದಿAದ ಪೂರ್ವ ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸುವುದು ಕಷ್ಟವಾಗುವುದಿಲ್ಲ. ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕಾಗಿದೆ ಎಂದು ಶ್ರೀ ಮೌನೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಸ್. ಬಡಿಗೇರ ರವರು ಇತ್ತೀಚಿಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಶ್ರೀ ಜಗದ್ಗುರು ಮೌನೇಶ್ವರ ಸಭಾಂಗಣದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಪೂರ್ವಬಾವಿ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆಯ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಕಾರ್ಯಾಗಾರದಲ್ಲಿ ಮಕ್ಕಳಿಗೆ ಸಾತ್ವಿಕ ಆಹಾರದೊಂದಿಗೆ ಶೈಕ್ಷಣಿಕ ಕಾಳಜಿಯ ಜೊತೆಗೆ ಬದ್ಧತೆಯಿಂದ ಪರೀಕ್ಷೆ ಬರೆದರೆ ಅತ್ಯುತ್ತಮ ಫಲಿತಾಂಶದೊAದಿಗೆ ತಂದೆ-ತಾಯಿಗಳ ಕನಸು ನನಸು ಮಾಡುವವರೊಂದಿಗೆ ಅಕ್ಷರಭ್ಯಾಸ ನೀಡಿದ ಗುರುಗಳಿಗೆ, ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ, ಊರಿಗೆ ಒಳ್ಳೆಯ ಹೆಸರು ತರಬಹುದು ಎಂದರು. ಶಿಕ್ಷಕರ, ಶಿಕ್ಷಕಿಯರ ಅನುಮತಿ ಮೇರೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ದಂಪತಿಗಳು, ರಾಣೇಬೆನ್ನೂರು ನಗರದಲ್ಲಿ ಭಾರತೀಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅರ್ಚನಾ ಮಠದ ಸೇರಿದಂತೆ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಶಿಕ್ಷಕರಾದ ಎ.ಕೆ.ಅಂಗಡಿ ಸ್ವಾಗತಿಸಿದರು. ಶಿಕ್ಷಕರಾದ ಕೆ.ಎನ್. ಕಾಚೇನಹಳ್ಳಿಯವರು ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಕ್ಷಕರಾದ ಹಾಲೇಶ್ ಸಿ.ಬಿ. ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here