ಬೆಳ್ತಂಗಡಿ: ಜ್ಞಾನಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆ, ಇಳಂತಿಲ ವಿದ್ಯಾನಗರ ಪ್ರಥಮ ಪೋಷಕರ ಸಭೆ ಸಿವಿಲ್ ಸರ್ವಿಸ್ ಪರೀಕ್ಷೆ ಫೌಂಡೇಷನ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಯಾಗಿ ಹೈದರ್ ಮರ್ಧಾಳ ಮೀಫ್ ಎಕ್ಸಿಕ್ಯೂಟಿವ್ ಸದಸ್ಯರು ಮತ್ತು ಮನ್ಷರ್ ಪ್ಯಾರಾ ಮೆಡಿಕಲ್ ಕಾಲೇಜ್ ಇದರ ಪ್ರಾಂಶುಪಾಲರು ಕಾರ್ಯಕ್ರಮ
ಪುಸ್ತಕ ಬಿಡುಗಡೆ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು ಮತ್ತು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಆದ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಭಾಗವಹಿಸಿದರು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಅವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶುಕೂರ್ ಮೇದರಬೆಟ್ಟು ಮತ್ತು ಫಾತಿಮಾ ನಿರ್ಮಾ ಅವರನ್ನು ಮರು ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ಮಜೀದ್ ಮಟ ಆಯ್ಕೆಯಾದರು. ಕಾರ್ಯದರ್ಶಿ ಅರುಣಾ ಆಯ್ಕೆಯಾದರು. ಕಾರ್ಯನಿರ್ವಾಹಕ ಸದಸ್ಯರಾಗಿ ಸಾದಿಕ್ ಅಗ್ನಾಡಿ, ಶುಕೂರ್ ಕುಪ್ಪೆಟ್ಟಿ, ಮೋಹಿನಿ, ಅಮಿತಾ ಹರೀಶ್, ಇಲ್ಯಾಸ್ ಕರಾಯ, ಸಿದ್ದಿಕ್ , ಸುನೈನಾ, ಸಿರಾಜ್ ಕಾರ್ಗಿಲ್, ಮುನೀರ್ ಇಳಂತಿಲ ಇವರು ಮರು ಆಯ್ಕೆಯಾದರು. ಕಾರ್ಯಕ್ರಮದ ನಿರೂಪಕರಾಗಿ ತಾಹಿರ (ವಿಜ್ಞಾನ ಶಿಕ್ಷಕಿ)ನೆರವೇರಿಸಿದರು.
ನೇತ್ರಾ ಅವರು ಸ್ವಾಗತ ನೆರವೇರಿಸಿದರು. ವಾರ್ಷಿಕ ಕಾರ್ಯಕ್ಷಮತೆಯ ವರದಿಯನ್ನು ಮುಖ್ಯೋಪಾಧ್ಯಾಯಿನಿ ಅರುಣಾ ಮಂಡಿಸಿದರು. ಸವಿತಾ ಧನ್ಯವಾದ ನೆರವೇರಿಸಿದರು.
ಶಾಲಾ ಸಂಚಾಲಕರು ಹೊಸದಾಗಿ ಆಯ್ಕೆಯಾದ ಸಮಿತಿಯನ್ನು ಅಭಿನಂದಿಸಿದರು ಮತ್ತು ಕಳೆದ ಎರಡು ವರ್ಷಗಳಲ್ಲಿ ಶಾಲೆಯ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಎಲ್ಲಾ ಪಿಟಿಎ ಸದಸ್ಯರಿಗೆ ಅವರ ಅಚಲ ಬೆಂಬಲ ಮತ್ತು ಸಮರ್ಪಣೆಗೆ ಶ್ರೇಯಸ್ಸು ಸಲ್ಲುತ್ತದೆ ಎಂದು ಅವರು ಒತ್ತಿ ಹೇಳಿದರು.