ಹೆಬ್ರಿ : ನಾಲ್ಕೂರು ಗ್ರಾಮದ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇದೇ ಎಪ್ರಿಲ್ 05ರಂದು ಬೆಳಿಗ್ಗೆ 11ಗಂಟೆಗೆ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತ ಪರಮಪೂಜ್ಯ ಅನಂತಶ್ರೀ ವಿಭೂಷಿತ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳವರು ಸನ್ಯಾಸ ದೀಕ್ಷೆ ಸ್ವೀಕರಿಸಿ ಪ್ರಥಮ ಭಾರಿ ಶ್ರೀ ಕ್ಷೇತ್ರ ಕಜ್ಕೆ ಶಾಖಾ ಮಠಕ್ಕೆ ಪುರಪ್ರವೇಶ ಮಾಡುವ ಈ ಸುಸಂದರ್ಭದಲ್ಲಿ ಪುರಪ್ರವೇಶ ಮತ್ತು ಉಭಯ ಗುರುಗಳಿಗೆ ಗುರುವಂದನಾ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಗುರುಗಳ ಪಾದಪೂಜೆ ಮಾಡಲು ಅವಕಾಶವಿದೆ. ಭಗವದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಜೇಶ ಆಚಾರ್ಯ ಹೆಬ್ರಿ ಮತ್ತು ಗೋಪಾಲಾಚಾರ್ಯ ಸಂತೇಕಟ್ಟೆ ತಿಳಿಸಿದ್ದಾರೆ.

