ಮಲ್ಪೆ : ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಶ್ರೀ ದೇವರ ಸನ್ನಿಧಿಯಲ್ಲಿ ಕುಮಾರಿ ಮಾನ್ಸಿ ಕೋಟ್ಯಾನ್ ಇವರಿಂದ ಭರತನಾಟ್ಯ ಕಾರ್ಯಕ್ರಮ ಶನಿವಾರ ನಡೆಯಿತು. ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವ ಅಧ್ಯಕ್ಷರಾದ ವಿಶ್ವನಾಥ ಶೆಣೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕುಮಾರಿ ಮಾನ್ಸಿ ಕೋಟ್ಯಾನ್ ವಿಧೂಷಿ ಡಾ. ಮಂಜರಿ ಚಂದ್ರರವರ ಶಿಷ್ಯೆಯಾಗಿದ್ದು , ಕರುಣಾಕರ ಹಾಗೂ ಗೀತಾ ಕೋಟಿಯನ್ ಇವರ ಮಗಳು, ಹಲವು ಕಡೆ ಕಾರ್ಯ ಕ್ರಮ ನೀಡಿ ಪ್ರಸಿದ್ಧರಾಗಿದ್ದಾರೆ. ಭರತನಾಟ್ಯ ಕಾರ್ಯಕ್ರಮ ನೀಡಿದ ಇವರಿಗೆ ದೇವಳದ ವತಿಯಿಂದ ಶಾಲು ಹೊದಿಸಿ , ಸ್ಮರಣಿಕೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.