ಕಡಂದಲೆ ವಿದ್ಯಾಗಿರಿ ಶಾಲೆಯಲ್ಲಿ ಪ್ರಾರಂಭೋತ್ಸವ

0
73

ಮೂಡುಬಿದಿರೆ: ಮಕ್ಕಳಿಗೆ ಎಳವೆಯಲ್ಲಿಯೆ ಬದುಕಿನ ವಿಚಾರಗಳ ಬಗ್ಗೆ ಅರಿವು, ಉತ್ತಮ ಶಿಕ್ಷಣ ನೀಡಿದರೆ ಮುಂದೆ ಸಮಾಜ ಸಾಮರಸ್ಯದಿಂದ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸಮರ್ಥ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಪೋಷಕರು ಇದನ್ನು ಅರಿಯುವುದು ಮುಖ್ಯ. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆ, ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ನಿಗವಹಿಸಬೇಕು. ಮಕ್ಕಳನ್ನು ಸೂಕ್ಷ್ಮತೆಯಿಂದ ಬೆಳೆಸಬೇಕು. ನಕರಾತ್ಮಕವಾಗಿ ಮಕ್ಕಳನ್ನು ಬೆಳೆಸಬಾರದು ಎಂದು ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಹೇಳಿದರು.


ಕಡಂದಲೆ ವಿದ್ಯಾಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕವನ್ನು ವಿತರಿಸಲಾಯಿತು.
ಎಸ್‍ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಉಪಾಧ್ಯಕ್ಷೆ ಪ್ರಣೀತಾ ಪೂಜಾರಿ, ಹಳೇ ವಿದ್ಯಾರ್ಥಿಸ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ ಪಾಲಡ್ಕ,ಮುಖ್ಯ ಶಿಕ್ಷಕಿ ಪ್ರತಿಭಾ ಎಂ.ಪಿ, ಶಿಕ್ಷಕರಾದ ಸತೀಶ್ ಶೆಟ್ಟಿ, ಪೌಲಿನ್ ಪಿಂಟೋ, ಸುಮನಾ ಎಚ್.ಸಿ ಅಂಗನವಾಡಿ ಕಾರ್ಯಕರ್ತೆ ಬೆನಡಿಕ್ಟಾ ಗಾಂತಿಸ್ ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here