ಜೈ ತುಲುನಾಡ್ ಸಂಘಟನೆದ ಬರವುದ ಬಿತ್ತ್‌ಲ್ ತುಲು ಸಾಹಿತ್ಯ ಕೂಟ ಉದ್ಘಾಟನೆ

0
39

ಕಿನ್ನಿಗೋಳಿ : ತುಳು ಸಾಹಿತ್ಯ ರಚನೆಯಲ್ಲಿ ಯುವಕರು ಮುಂದಾಗಬೇಕು. ತುಳು ಭಾಷೆಗಾಗಿ ಕೆಲಸ ಮಾಡುವ ಉತ್ಸಾಹಿಗಳು ಹೆಚ್ಚುತ್ತಿರುವುದು ಸಮಾಧಾನಕರವಾಗಿದೆ ಎಂದು ಸಾಹಿತಿ ಕುಶಲಾಕ್ಷಿ ವಿ. ಕಣ್ವತೀರ್ಥ ಹೇಳಿದರು.

ಅವರು ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಜೈ ತುಳುನಾಡ್ ಸಂಸ್ಥೆಯ ಆಶ್ರಯದಲ್ಲಿ ಬರವುದ ಬಿತ್ತ್‌ಲ್ ತುಲು ಸಾಹಿತ್ಯ ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ಉದಯ ಪೂಂಜಾ ತಾಳಿಪಾಡಿಗುತ್ತು ಮಾತನಾಡಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ವಿವಿಧ ಕಡೆಗಳಲ್ಲಿ ತುಳುವರು ಹೀಗೆ ಮೂವತ್ತೈದು ಸಾವಿರಕ್ಕೂ ಹೆಚ್ಚು ಮಂದಿಗೆ ತುಳುಲಿಪಿ ಕಾರ್ಯಾಗಾರಗಳನ್ನು ಕಲಿಸಲಾಗಿದೆ. ಇದಕ್ಕಾಗಿ ನಮ್ಮ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಮಾಡದೆ ಕೇವಲ ತುಳು ಭಾಷೆಯ ಅಭಿಮಾನದಿಂದ ಕೆಲಸ ಮಾಡಿದ್ದಾರೆ. ಸಾಹಿತ್ಯದ ಚಟುವಟಿಕೆಗಳಲ್ಲೂ ಸಾಕಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿದ್ದೇವೆ ಎಂದು ಹೇಳಿದರು.

ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ತಾ. ಪಂ. ಮಾಜಿ ಸದಸ್ಯ ದಿವಾಕರ ಕರ್ಕೇರಾ, ಸುಕುಮಾರ ಶೆಟ್ಟಿ ತಾಳಿಪಾಡಿ ಗುತ್ತು, ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಉದ್ಯಮಿ ಅಭಿಲಾಷ್ ಶೆಟ್ಟಿ , ನಿಯೋಜಿತ ಅಧ್ಯಕ್ಷೆ ಸವಿತಾ ಕರ್ಕೇರಾ ಕಾವೂರು ಉಪಸ್ಥಿತರಿದ್ದರು. ಕಿರಣ್ ತುಳುವೆ ಸ್ವಾಗತಿಸಿದರು, ಪೂರ್ಣಿಮಾ ಬಂಟ್ವಾಳ ಧನ್ಯವಾದ ಅರ್ಪಿಸಿದರು ರೇಣುಕಾ ಕಣಿಯೂರು ನಿರೂಪಿಸಿದರು.

LEAVE A REPLY

Please enter your comment!
Please enter your name here