ಬೈಂದೂರು ವಿಧಾನಸಭಾ ಕ್ಷೇತ್ರದ ಕಿಶೋರ ಯಕ್ಷಗಾನ ಉದ್ಘಾಟನೆ

0
64

ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಬೈಂದೂರು ವಿಧಾನಸಭಾ ಕ್ಷೇತ್ರದ 17 ಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡುತ್ತಿದ್ದು ಇವುಗಳ ಪ್ರದರ್ಶನವನ್ನು ನಾಲ್ಕು ಕಡೆಗಳಲ್ಲಿ ಆಯೋಜಿಸಲಾಗಿದೆ. ಇದರ ಉದ್ಘಾಟನೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ- ನೆಂಪು ಇಲ್ಲಿನ ಸಾಂಸ್ಕೃತಿಕ ಸಭಾ ಭವನದಲ್ಲಿ ಜರಗಿತು.

ಪ್ರದರ್ಶನಗಳನ್ನು ಉದ್ಘಾಟಿಸಿದ ಶಾಸಕ ಗುರುರಾಜ ಗಂಟಿಹೊಳೆಯವರು ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣ ಅತ್ಯುತ್ತಮ ಯೋಜನೆ. ಇದನ್ನು ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅಷ್ಟು ದೂರದಿಂದ ಇಲ್ಲಿಗೆ ಬಂದು ಏರ್ಪಡಿಸುವ ಅವರಿಗೆ ಆರ್ಥಿಕ ಹೊರೆಯಾಗದಂತೆ ಸಹಕರಿಸ ಬೇಕಾದುದು ನಮ್ಮ ಕರ್ತವ್ಯ ಎಂದು ಹೇಳಿದರು. ರಾಜೀವ ಶೆಟ್ಟಿ, ಬಿಜ್ರಿ ಅಧ್ಯಕ್ಷತೆ ವಹಿಸಿದ್ದರು.

ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನೆಂಪು ಮಾತನಾಡಿ ಇದು ನಮ್ಮ ಶಾಲೆಗೆ, ಊರಿಗೆ ದೊರೆತ ಅಪೂರ್ವ ಅವಕಾಶ ಇದನ್ನು ಯಶಸ್ವಿಗೊಳಿಸ ಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ವಿಶೇಷ ಅತಿಥಿಯಾಗಿ ಬೆಂಗಳೂರಿನ ಉದ್ಯಮಿ ಮುರಳಿ ಸಾಮ್ಯತಾ ಭಾಗವಹಿಸಿದ್ದರು. ವೇದಿಕೆಯಲ್ಲಿ ಗಿರೀಶ ನಾಯ್ಕ, ಕರಣ ಪೂಜಾರಿ, ರಾಜೀವ ಶೆಟ್ಟಿ, ರಘುರಾಮ ಶೆಟ್ಟಿ, ಎಂ ಗಂಗಾಧರರಾವ್, ಗೋಪಾಲ ನಾಯ್ಕ್ , ಶಿಲ್ಪಾ ಶೆಟ್ಟಿ, ಶಾಂತಿಸಾಗರ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಗಣೇಶ ಸೋಮಯಾಜಿ, ಕೃಷ್ಣರಾಜ ಭಟ್, ಅಭ್ಯಾಗತರಾಗಿ ಭಾಗವಹಿಸಿದ್ದರು. ಕುಪ್ಪಯ್ಯ ಮರಾಠಿ, ಸವಿತಾ, ಯು. ಎಸ್ ರಾಜಗೋಪಾಲ ಆಚಾರ್ಯ, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಧರ ಭಟ್ ಸ್ವಾಗತಿಸಿದರು. ಚಿತ್ತೂರು ರವಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನ ಕುದ್ರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ರಾಣಿ ಶಶಿಪ್ರಭೆ’, ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ಇಲ್ಲಿಯ ವಿದ್ಯಾರ್ಥಿಗಳಿಂದ ‘ರುಕ್ಮಿಣೀ ಸ್ವಯಂವರ – ರುಗ್ಮಾವತಿ ಕಲ್ಯಾಣ’ ಪ್ರಸ್ತುತಗೊಂಡಿತು.

LEAVE A REPLY

Please enter your comment!
Please enter your name here